ದರ್ಶನ್ ನಟನೆಯ ‘ದಿ ಡೆವಿಲ್’ ಡಿಸೆಂಬರ್ 11 ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಅದಕ್ಕೂ ಮುನ್ನ ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡ, ಮಾಲ್’ಗಳಲ್ಲಿ ಬೃಹತ್ ವಿನೈಲ್ ಹಾಗೂ ಎಲ್.ಇ.ಡಿ ಪರದೆಗಳಲ್ಲಿ ‘ಡೆವಿಲ್’ ಝಲಕ್ ದರ್ಶನ ಮಾಡಿಸಲಾಗಿತ್ತು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾದಲ್ಲಿ ನಟ ದರ್ಶನ್ ಬಳಸಿರುವ ಚೇರ್ ಅನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಈ ಚೇರ್ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳಬಹುದು, ವಿಡಿಯೋ ಕೂಡ ಮಾಡಬಹುದು.
ಇದನ್ನು ಬೆಂಗಳೂರಿನ ಓರಾಯನ್ ಮಾಲ್’ನಲ್ಲಿ ಇಡಲಾಗಿದ್ದು, ಅಲ್ಲಿ ತೆಗೆದ ಫೋಟೋ, ವಿಡಿಯೋಗಳನ್ನು ಚಿತ್ರತಂಡಕ್ಕೂ ಟ್ಯಾಗ್ ಮಾಡಬಹುದಾಗಿದೆ.
ಇದಲ್ಲದೇ ಈಗಾಗಲೇ ಹಲವು ಚಿತ್ರಮಂದಿರಗಳಲ್ಲಿ ಡೆವಿಲ್ ಚಿತ್ರದ ಕಟೌಟ್ ನಿಲ್ಲಿಸಲಾಗಿದೆ. ದರ್ಶನ್ ಅಭಿಮಾನಿಗಳು ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಜೆ.ಜಯಮ್ಮ ಹಾಗೂ ಸರೇಗಮ ಜಂಟಿಯಾಗಿ ನಿರ್ಮಿಸಿದ್ದಾರೆ. ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.
ದರ್ಶನ್ ಜೋಡಿಯಾಗಿ ರಚನಾ ರೈ ನಟಿಸಿದ್ದು, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭರಾಜ್ ಈ ಚಿತ್ರದ ತಾರಾಗಣದಲ್ಲಿದ್ದಾರೆ.
























For all you betting enthusiasts, I gave 777kingbet a whirl. The odds seem fair and the platform is easy to use. Could be your next favorite betting site!