ಜಗತ್ತಿನ ಅತಿದೊಡ್ಡ ಮತ್ತು ಅತ್ಯಂತ ಪವಿತ್ರ ಧಾರ್ಮಿಕ ಸಮಾವೇಶಗಳಲ್ಲಿ ಒಂದಾದ ‘ಕುಂಭಮೇಳ’ಕ್ಕೆ ಕ್ಷಣಗಣನೆ ಆರಂಭವಾಗಿದೆ. ದೇವಭೂಮಿ ಉತ್ತರಾಖಂಡದ ಹರಿದ್ವಾರದಲ್ಲಿ 2027ರಲ್ಲಿ ನಡೆಯಲಿರುವ ಐತಿಹಾಸಿಕ ಕುಂಭಮೇಳದ ದಿನಾಂಕಗಳನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧಿಕೃತವಾಗಿ ಘೋಷಿಸಿದ್ದಾರೆ.
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕುಂಭಮೇಳದ ದಿನಾಂಕ ಮತ್ತು ಸಿದ್ಧತೆಗಳ ಕುರಿತಾದ ಸಭೆಯನ್ನು ನೇರವಾಗಿ ಗಂಗಾ ನದಿಯ ಘಾಟ್‌ನಲ್ಲಿ ನಡೆಸಲಾಯಿತು. 13 ಪ್ರಮುಖ ಅಖಾಡಗಳ ಸಾಧು-ಸಂತರು ಮತ್ತು ಮುಖಂಡರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ, ಸಂತರ ಸಲಹೆಗಳ ಮೇರೆಗೆ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಸಂತರ ಸಂಪ್ರದಾಯ ಮತ್ತು ಭಕ್ತರ ಅನುಕೂಲಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಪ್ರಮುಖ ಸ್ನಾನದ ದಿನಾಂಕಗಳು (ವೇಳಾಪಟ್ಟಿ): ಭಕ್ತಾದಿಗಳು ತಮ್ಮ ಯಾತ್ರೆಯನ್ನು ಯೋಜಿಸಲು ಅನುಕೂಲವಾಗುವಂತೆ ಪ್ರಮುಖ ಸ್ನಾನದ ದಿನಗಳನ್ನು ಪ್ರಕಟಿಸಲಾಗಿದೆ.
ಜನವರಿ 14: ಮಕರ ಸಂಕ್ರಾಂತಿ (ಕುಂಭ ಆರಂಭ)
ಫೆಬ್ರವರಿ 6: ಮೌನಿ ಅಮಾವಾಸ್ಯೆ
ಫೆಬ್ರವರಿ 11: ವಸಂತ ಪಂಚಮಿ
ಫೆಬ್ರವರಿ 20: ಮಾಘ ಪೂರ್ಣಿಮೆ
ಮಾರ್ಚ್ 6: ಮಹಾಶಿವರಾತ್ರಿ (ಅಮೃತ ಸ್ನಾನ – ಅತ್ಯಂತ ಪ್ರಮುಖ ದಿನ)
ಮಾರ್ಚ್ 8: ಫಾಲ್ಗುಣ ಅಮಾವಾಸ್ಯೆ
ಏಪ್ರಿಲ್ 7: ನವ ಸಂವತ್ಸರ (ಯುಗಾದಿ)
ಏಪ್ರಿಲ್ 14: ಮೇಷ ಸಂಕ್ರಾಂತಿ (ಶಾಹಿ ಸ್ನಾನ)
ಏಪ್ರಿಲ್ 15: ರಾಮ ನವಮಿ
ಏಪ್ರಿಲ್ 20: ಚೈತ್ರ ಪೂರ್ಣಿಮೆ (ಸಮಾರೋಪ)
ಭರ್ಜರಿ ಸಿದ್ಧತೆ ಮತ್ತು ವಿಶೇಷತೆಗಳು: 2027ರ ಕುಂಭಮೇಳವು ಹಿಂದಿನ ಎಲ್ಲ ಮೇಳಗಳಿಗಿಂತ ವಿಶಿಷ್ಟವಾಗಿರಲಿದೆ. 2010 ಮತ್ತು 2021ರ ಅಂಕಿಅಂಶಗಳನ್ನು ಮೀರಿಸಿ, ಈ ಬಾರಿ ಕೋಟ್ಯಂತರ ಭಕ್ತರು ಹರಿದ್ವಾರಕ್ಕೆ ಹರಿದುಬರುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಿನಿಂದಲೇ ಸಮರೋಪಾದಿಯಲ್ಲಿ ಸಿದ್ಧತೆ ಆರಂಭಿಸಿದೆ.
ಭದ್ರತೆ: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೇಂದ್ರ ಭದ್ರತಾ ಪಡೆಗಳು, ಎನ್‌ಡಿಆರ್‌ಎಫ್ (NDRF) ಮತ್ತು ಸ್ಥಳೀಯ ಪೊಲೀಸರು ಹಗಲಿರುಳು ಕಾವಲು ಕಾಯಲಿದ್ದಾರೆ. ಜನಸಂದಣಿ ನಿಯಂತ್ರಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳನ್ನು ಬಳಸುವ ಸಾಧ್ಯತೆಯಿದೆ.
ಸ್ವಚ್ಛತೆ: ‘ಸ್ವಚ್ಛ ಕುಂಭ, ಹಸಿರು ಕುಂಭ’ ಎಂಬ ಧ್ಯೇಯದೊಂದಿಗೆ ತ್ಯಾಜ್ಯ ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಗಂಗಾ ನದಿಯ ಸ್ವಚ್ಛತೆಯನ್ನು ಕಾಪಾಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಮೂಲಸೌಕರ್ಯ: ದೇಶದ ನಾನಾ ಮೂಲೆಗಳಿಂದ ಬರುವ ಭಕ್ತರಿಗಾಗಿ ಸಾರಿಗೆ ವ್ಯವಸ್ಥೆ, ತಂಗಲು ವಸತಿ ಮತ್ತು ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ಸನಾತನ ಧರ್ಮದ ವೈಭವವನ್ನು ಸಾರುವ ಈ ಮಹಾ ಕುಂಭಮೇಳಕ್ಕೆ ಹರಿದ್ವಾರ ಈಗಿನಿಂದಲೇ ಮದುವಣಗಿತ್ತಿಯಂತೆ ಸಿಂಗಾರಗೊಳ್ಳಲು ಸಜ್ಜಾಗುತ್ತಿದೆ. ಗಂಗೆಯ ಮಡಿಲಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗಲು ಭಕ್ತರಿಗೂ ಇದು ಸುಸಕಾಲ.























Tried out bat939 the other day, not bad! Good for casual gaming. Definitely worth checking out at bat939