ಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರ ಸಂವಾದ – ಭವಿಷ್ಯತ್ತಿನ ಕುರಿತ ಚರ್ಚೆ

0
58

ಬೆಂಗಳೂರು: ನೊಬೆಲ್ ಪುರಸ್ಕಾರ (Nobel Prize)ವೆಂಬುದು ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದು. ಈ ಪುರಸ್ಕಾರ ಪಡೆಯುವುದು ಕೇಳಿ ಅಥವಾ ಬೇಡಿಕೊಂಡು ಸಾಧ್ಯವಲ್ಲ – ಅದು ತಮ್ಮ ಸಾಧನೆಯ ಮೂಲಕವೇ ದೊರಕುತ್ತದೆ. ಇದೇ ನೊಬೆಲ್ ಪುರಸ್ಕೃತರನ್ನು ಕನ್ನಡನಾಡು ಆತಿಥ್ಯ ನೀಡಲು ಸಜ್ಜಾಗಿದೆ.

ನವಂಬರ್ 3ರಿಂದ 5ರವರೆಗೆ ಬೆಂಗಳೂರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ “ನಮಗೆ ಬೇಕಾದ ಭವಿಷ್ಯತ್ತು (The Future We Want)” ಎಂಬ ಥೀಮ್‌ನಡಿ ನೊಬೆಲ್ ಪುರಸ್ಕೃತರ ಸಂವಾದ ನಡೆಯಲಿದೆ.

ಈ ಕಾರ್ಯಕ್ರಮವನ್ನು ಟಾಟಾ ಟ್ರಸ್ಟ್‌ಗಳು ಹಾಗೂ ನೋಬೆಲ್ ಪ್ರೈಸ್ ಔಟ್‌ರೀಚ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದು, ಯುವಜನತೆಗೆ ಜ್ಞಾನ ವಿನಿಮಯ, ಸೃಜನಶೀಲತೆ, ಒಳಗೊಂಡಿಕೆ (inclusivity) ಮತ್ತು ಸಮಾನತೆಯುಳ್ಳ ಭವಿಷ್ಯವನ್ನು ನಿರ್ಮಿಸುವ ಹಾದಿ ತೋರಿಸುವ ಉದ್ದೇಶ ಹೊಂದಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಮುಖ ನೊಬೆಲ್ ಪುರಸ್ಕೃತರಲ್ಲಿ – ಡೇವಿಡ್ ಮ್ಯಾಕ್‌ಮಿಲನ್ (ರಸಾಯನಶಾಸ್ತ್ರ, 2021). ಜೇಮ್ಸ್ ರಾಬಿನ್ಸನ್ (ಆರ್ಥಿಕ ವಿಜ್ಞಾನ, 2024) ಅವರ ಜೊತೆಗೆ ತಜ್ಞರಾದ ತೊಲುಲಾಹ್ ಓನಿ, ಗಗನ್‌ದೀಪ್ ಕಾಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಕುಶ್ ಪಾರ್ಮರ್ ಅವರುಗಳು ಉಪಸ್ಥಿತರಿರಲಿದ್ದಾರೆ.

ಡೇವಿಡ್ ಮ್ಯಾಕ್‌ಮಿಲನ್ ಅವರು ಈ ಸಂವಾದದ ಕುರಿತು ಹೇಳುವಾಗ, “ಭಾರತಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಲು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ವಿಜ್ಞಾನಕ್ಕೆ ಇರುವ ಉತ್ಸಾಹ ಪ್ರೇರಣಾದಾಯಕವಾಗಿದೆ. ಸಂಶೋಧನೆ ಮತ್ತು ಆವಿಷ್ಕಾರದ ಭವಿಷ್ಯ ಕುರಿತು ಚರ್ಚಿಸಲು ನಾನು ಎದುರು ನೋಡುತ್ತಿದ್ದೇನೆ,” ಎಂದರು.

ಕಾರ್ಯಕ್ರಮದಲ್ಲಿ ಮುಂದಿನ ದಶಕವನ್ನು ರೂಪಿಸುವ ಮೆಗಾಟ್ರೆಂಡ್ಸ್ (Megatrends) ಕುರಿತು ಭಾಷಣಗಳು, ಪ್ಯಾನಲ್ ಚರ್ಚೆಗಳು ಮತ್ತು ಸಂವಾದಗಳು ನಡೆಯಲಿವೆ.

ನೋಬೆಲ್ ಫೌಂಡೇಶನ್‌ನ ಕಾರ್ಯನಿರ್ವಹಣಾ ನಿರ್ದೇಶಕಿ ಹನ್ನಾ ಸ್ಟ್ಯಾರ್ನೆ ಮಾತನಾಡಿ “125 ವರ್ಷಗಳಿಂದ ನೊಬೆಲ್ ಪ್ರಶಸ್ತಿ ಮಾನವಕುಲಕ್ಕೆ ಅತ್ಯಂತ ಹೆಚ್ಚು ಪ್ರಯೋಜನ ನೀಡಿದವರಿಗೆ ನೀಡಲಾಗುತ್ತಿದೆ. ಭಾರತದಲ್ಲಿ ನಡೆಯುವ ಈ ಸಂವಾದಗಳು ಜ್ಞಾನ, ಸೃಜನಶೀಲತೆ ಮತ್ತು ಸಹಕಾರದ ಮಹತ್ವವನ್ನು ಬೆಳಗುತ್ತವೆ. ನೋಬೆಲ್ ಪ್ರಶಸ್ತಿಯ ಕಥೆಗಳು ಹೊಸ ತಲೆಮಾರಿಗೆ ಪ್ರೇರಣೆ ನೀಡಲಿವೆ ಎಂದರು.

ಟಾಟಾ ಟ್ರಸ್ಟ್‌ಗಳ ಸಿಇಒ ಸಿದ್ಧಾರ್ಥ್ ಶರ್ಮಾ ಈ ಕುರಿತಂತೆ “ಟಾಟಾ ಟ್ರಸ್ಟ್‌ಗಳು ಶತಮಾನಕ್ಕೂ ಹೆಚ್ಚು ಕಾಲದಿಂದ ಹಿಂದುಳಿದ ವರ್ಗಗಳ upliftmentಗಾಗಿ ಕಾರ್ಯನಿರ್ವಹಿಸುತ್ತಿವೆ. ನೋಬೆಲ್ ಪ್ರೈಸ್ ಔಟ್‌ರೀಚ್‌ನೊಂದಿಗೆ ಸಹಭಾಗಿತ್ವವು ಸಮಾನತೆಯುಳ್ಳ ಸಮಾಜವನ್ನು ನಿರ್ಮಿಸಲು ಮತ್ತು ಅಧ್ಯಯನ, ಆವಿಷ್ಕಾರ, ಒಳಗೊಳ್ಳುವಿಕೆಯ ಮೂಲಕ ಮಾನವ ಪ್ರಗತಿಯನ್ನು ಮುಂದುವರಿಸಲು ನಮ್ಮ ಬದ್ಧತೆಯನ್ನು ಸಾರುತ್ತದೆ ಎಂದಿದ್ದಾರೆ

ಈ ನೋಬೆಲ್ ಪುರಸ್ಕಾರ ಸಂವಾದವನ್ನು ABB, EQT, Scania ಮತ್ತು Stegra ಎಂಬ ಅಂತರರಾಷ್ಟ್ರೀಯ ಭಾಗೀದಾರರ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

Previous articleಸಿಎಂ ವರುಣಾ ಕ್ಷೇತ್ರದ ಕಣ್ಣೀರು: ಬಿಲ್ ಬಾಕಿಯ ನೆಪದಲ್ಲಿ ಅಂಧ ಅಜ್ಜಿಗೆ ದೌರ್ಜನ್ಯ!
Next articleಶಿವಮೊಗ್ಗ: ಮರಕ್ಕೆ ಗೂಡ್ಸ್‌ ಡಿಕ್ಕಿ ಮೂವರ ದುರ್ಮರಣ

LEAVE A REPLY

Please enter your comment!
Please enter your name here