ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆ: ಬಿಜೆಪಿ ತಂಡ ಪ್ರಕಟ

0
64

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸಂಬಂಧಿತ ಚಟುವಟಿಕೆಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಪ್ರಮುಖ ಸಂಯೋಜನಾ ತಂಡವನ್ನು ರಚಿಸಿದ್ದಾರೆ.

ಈ ಕುರಿತು ಪಕ್ಷದ ಕೇಂದ್ರ ಕಚೇರಿ ‘ಜಗನ್ನಾಥ ಭವನ’ದಿಂದ ಪ್ರಕಟಣೆ ಹೊರಬಿದ್ದಿದ್ದು, ಅದರಲ್ಲಿ ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲಾ ಸಂಯೋಜಕರು, ಮತ್ತು 5 ಪಾಲಿಕೆಗಳ ಪ್ರಮುಖರು ಹಾಗೂ ಸಹಪ್ರಮುಖರುಗಳನ್ನು ಘೋಷಿಸಲಾಗಿದೆ.

ಈ ತಂಡದ ಮೂಲಕ ಬಿಜೆಪಿ, ಬೆಂಗಳೂರಿನ ಸ್ಥಳೀಯ ಚುನಾವಣೆಯಲ್ಲಿ ತೀವ್ರ ಚಟುವಟಿಕೆಗಳನ್ನು ನಡೆಸಿ, ಸಂಘಟನಾ ಬಲವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಸಂಯೋಜಕರ ತಂಡದ ಸದಸ್ಯರು:

ಬಿ. ವೈ. ವಿಜಯೇಂದ್ರ

ಆರ್. ಅಶೋಕ್

ಚಲವಾದಿ ನಾರಾಯಸ್ವಾಮಿ

ಡಿ ವಿ ಸದಾನಂದಗೌಡ

ಎಸ್‌ ಸುರೇಶ ಕುಮಾರ್‌

ಶೋಭಾ ಕರಂದ್ಲಾಜೆ

ಪಿ. ಸಿ ಮೋಹನ್‌

ಸಿ. ಎನ್‌. ಮಂಜುನಾಥ್‌

ತೇಜಸ್ವಿ ಸೂರ್ಯ

ಡಾ. ಕೆ. ಸುಧಾಕರ್

ಎಸ್.ಎಸ್. ನಂದೀಶ್‌ ರೆಡ್ಡಿ

ಸಂಘಟನಾತ್ಮಕ ಜಿಲ್ಲಾ ಪ್ರಮುಖರು:

ಬೆಂಗಳೂರು ದಕ್ಷಿಣ: ಸಿ. ಕೆ. ರಾಮಮೂರ್ತಿ

ಬೆಂಗಳೂರು ಉತ್ತರ: ಎಸ್. ಹರೀಶ್‌

ಬೆಂಗಳೂರು ಕೇಂದ್ರ: ಎ. ಆರ್‌ ಸಪ್ತಗಿರಿ ಗೌಡ

ಪಾಲಿಕೆ ಪ್ರಮುಖರು ಹಾಗೂ ಸಹ ಪ್ರಮುಖರು:

ಬೆಂಗಳೂರು ಪೂರ್ವ: ಎಂ. ಎನ್. ನಾಗರಾಜ್, ಕೆ.ಎಸ್. ನವೀನ್‌

ಬೆಂಗಳೂರು ಉತ್ತರ: ಮುನಿರತ್ನ, ಭಾರತಿ ಶೆಟ್ಟಿ

ಬೆಂಗಳೂರು ದಕ್ಷಿಣ: ಬಿ. ಎ ಬಸವರಾಜು (ಬೈರತಿ), ಎನ್‌. ರವಿಕುಮಾರ್‌

ಬೆಂಗಳೂರು ಕೇಂದ್ರ: ಸಿ. ಎನ್‌ ಅಶ್ವಥನಾರಾಯಣ, ಡಿ. ಎಸ್.ಅರುಣ್‌

ಬೆಂಗಳೂರು ಪಶ್ಚಿಮ: ಕೆ. ಗೋಪಾಲಯ್ಯ, ಎ. ನಾರಾಯಣ ಸ್ವಾಮಿ, ಅಶ್ವಥ್‌ ನಾರಾಯಣ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯಲಿರುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಕೆಳಕಂಡ ಪ್ರಮುಖರನ್ನು ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ 5 ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹ ಪ್ರಮುಖರನ್ನಾಗಿ ನಿಯೋಜಿಸಿ ಆದೇಶಿಸಿದ್ದಾರೆ.

Previous articleಮೈಸೂರು ಬಳಿ ಭ್ರೂಣ ಹತ್ಯೆಯ ಕರಾಳ ಜಾಲ ಭೇದಿಸಿದ ಅಧಿಕಾರಿಗಳು!
Next articleಟೀಮ್ ಇಂಡಿಯಾಗೆ ಮುಖಭಂಗ: ಕೊಹ್ಲಿ ‘ಡಕ್’ ದಾಖಲೆ, ಫೀಲ್ಡಿಂಗ್ ವೈಫಲ್ಯಕ್ಕೆ ತೆತ್ತ ಬೆಲೆ!

LEAVE A REPLY

Please enter your comment!
Please enter your name here