Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಕಾಂತಾರ ಚಿತ್ರ ಪ್ರದರ್ಶನಕ್ಕೆ ತಾಂತ್ರಿಕ ಅಡಚಣೆ

ಬೆಳಗಾವಿ: ಕಾಂತಾರ ಚಿತ್ರ ಪ್ರದರ್ಶನಕ್ಕೆ ತಾಂತ್ರಿಕ ಅಡಚಣೆ

0
149

ಬೆಳಗಾವಿ : ಕಾಂತಾರ ಚಲನ ಚಿತ್ರ ಪ್ರದರ್ಶನಕ್ಕೆ ತಾಂತ್ರಿಕ ಅಡಚಣೆಯುಂಟಾದ ಪರಿಣಾಮವಾಗಿ ಒಂದೂವರೆ ಗಂಟೆ ವಿಳಂಬವಾಯಿತು. ಇದರಿಂದಾಗಿ ರೊಚ್ಚಿಗೆದ್ದ ವೀಕ್ಷಕರು ಚಲನಚಿತ್ರ ಮಂದಿರದ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ರವಿವಾರ ನಗರದಲ್ಲಿ ನಡೆದಿದೆ.
ಮಧ್ಯಾಹ್ನ 3.30 ರ ಚಿತ್ರ ಪ್ರದರ್ಶನ 4.45 ಗಂಟೆ ಆದರೂ ಆರಂಭವಾಗಲೇ ಇಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ವೀಕ್ಷಕರು ಚಿತ್ರಮಂದಿರದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹಣ ಮರಳಿಸುವಂತೆ ಆಗ್ರಹಿಸಿದರು. ಪೊಲೀಸರು ಮನವೊಲಿಸಲು ಹರಸಾಹಸ ಪಟ್ಟರು.
ನ್ಯೂಕ್ಲಿಯಸ್ ಮಾಲ್ ನಲ್ಲಿ ಘಟನೆ ನಡೆದಿದ್ದು, ಪ್ರತಿ ಟಿಕೆಟ್ ಗೆ 150 ರೂ. ಹೆಚ್ಚುವರಿಯಾಗಿ ಹಣ ಮರಳಿಸಿದರು.
ಆದರೆ, ವೀಕ್ಷಕರು ಎರಡರಷ್ಟು ಹಣ ನೀಡುವಂತೆ ಆಗ್ರಹಿಸಿದ ಕಾರಣ ಕೆಲ ಕಾಲ ಗೊಂದಲ ಉಂಟಾಯಿತು
ಸ್ಥಳಕ್ಕೆ ಖಡೇಬಜಾರ್ ಠಾಣೆಯ ಪೊಲೀಸರು ಬಂದು ತಿಳಿಗೊಳಿಸಿದರು. ಹಣ ಮರಳಿ ಪಡೆಯಲು ನೂಕುನುಗ್ಗಲು ಉಂಟಾಯಿತು.

LEAVE A REPLY

Please enter your comment!
Please enter your name here