ಬೆಂಗಳೂರು: ಕನ್ನಡ ಚಿತ್ರರಂಗದ “ಡಿಂಪಲ್ ಕ್ವೀನ್” ರಚಿತಾ ರಾಮ್ ಇಂದು ತಮ್ಮ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಆಚರಿಸುತ್ತಿದ್ದು, ಹ್ಯಾಶ್‌ಟ್ಯಾಗ್‌ಗಳ ಮೂಲಕ ಶುಭಾಶಯಗಳ ಮಳೆ ಸುರಿಯುತ್ತಿದ್ದಾರೆ.
ಲ್ಯಾಂಡ್ ಲಾರ್ಡ್ ತಂಡದಿಂದ ವಿಶೇಷ ಉಡುಗೊರೆ: ರಚಿತಾ ರಾಮ್ ಅಭಿನಯಿಸಿರುವ ಮುಂದಿನ ಚಿತ್ರ “ಲ್ಯಾಂಡ್ ಲಾರ್ಡ್” ತಂಡ ಇಂದು ನಟಿಗೆ ಜನ್ಮದಿನದಂದು ಚಿತ್ರದ ವಿಶೇಷ ವಿಡಿಯೋ ತುಣಕೊಂದನ್ನು ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ರಚಿತಾ, 18 ವರ್ಷದ ಮಗಳನ್ನು ಹೊಂದಿರುವ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ವೈವಿಧ್ಯಮಯ ಹಾಗೂ ಭಿನ್ನವಾದ ಪಾತ್ರವಾಗಿದ್ದು, ಅವರ ಅಭಿಮಾನಿಗಳು ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಹೊಸ ರೂಪದಲ್ಲಿ ರಚಿತಾ – “ಡಿಂಪಲ್ ಕ್ವೀನ್” ನೋಡಿದಷ್ಟು ಸಿಂಪಲ್ ಅಲ್ಲ: ಇತ್ತೀಚೆಗೆ ತೆರೆಕಂಡ ತಮಿಳು ಸಿನಿಮಾ ‘ಕೂಲಿ’ ಬಳಿಕ ರಚಿತಾ ರಾಮ್ ಅವರ ಸಿನಿಗ್ರಾಫ್‌ನಲ್ಲಿ ಹೊಸ ತಿರುವು ಕಂಡುಬಂದಿದೆ. “ಡಿಂಪಲ್ ಕ್ಲೀನ್ ನೋಡಿದಷ್ಟು ಸಿಂಪಲ್ ಅಲ್ಲ” ಎಂಬ ಧ್ಯೇಯದೊಂದಿಗೆ, ಅವರು ವಿಭಿನ್ನ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಸಜ್ಜಾಗಿದ್ದಾರೆ.
ಹಿಟ್‌ಗಳ ಹಾದಿಯಲ್ಲಿ ರಚಿತಾ: ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿರುವ ರಚಿತಾ, ತಮ್ಮ ಸೌಂದರ್ಯ ಮತ್ತು ಅಭಿನಯ ಶೈಲಿಯಿಂದ ಸ್ಯಾಂಡಲ್‌ವುಡ್‌ನ ಪ್ರಮುಖ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗ ತಾಯಿ ಪಾತ್ರದಂತಹ ಗಂಭೀರ ಹಾಗೂ ಸವಾಲಿನ ಪಾತ್ರಗಳನ್ನು ಮಾಡುತ್ತಿರುವುದು, ಅವರ ವೃತ್ತಿಜೀವನಕ್ಕೆ ಹೊಸ ಮೆಲುಕು ನೀಡಲಿದೆ.
2 ವರ್ಷದ ನಂತರ ಹುಟ್ಟುಹಬ್ಬ ಆಚರಣೆ: 2 ವರ್ಷದ ನಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ ಎಂದು ನಟಿ ರಚಿತರಾಮ್ ಹೇಳಿದ್ದಾರೆ ಮಾಧ್ಯಮದವರ ಜೊತೆ ಫಸ್ಟ್ ಟೈಮ್ ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದೇನೆ. ಲ್ಯಾಂಡ್ ಲಾರ್ಡ್ ಸಿನಿಮಾ ಸಿಗೋದಕ್ಕೆ ದರ್ಶನ್ ಕಾರಣ. ನಾನು ದರ್ಶನ್ ಅವರ ಜೊತೆ ಮಾತಾಡಿದಾಗ ಒಪ್ಪಿಕೋ ಎಂದು ಹೇಳಿದ್ದರು.
ರಾಜಕೀಯಕ್ಕೆ No Entry: ಸಾಕಷ್ಟು ಸಿನಿಮಾಗಳ ಅವಕಾಶ ಬರುತ್ತಿವೆ. ಬೇರೆ ಇಂಡಸ್ಟ್ರಿಂದ ನೆಗೆಟಿವ್ ಪಾತ್ರಗಳೇ ಹೆಚ್ಚಾಗಿ ಬರುತ್ತಿದೆ. ನಾನು ರಾಜಕೀಯಕ್ಕೆ ಬರುವ ಮಾತೇ ಇಲ್ಲ. ರಾಜಕಾರಣ ನನಗೆ ಗೊತ್ತಿಲ್ಲ ಎಂದರು.
ಮದುವೆಗೆ ಮನೆಯಲ್ಲಿ ಹುಡುಗನ ಹುಡುಕುತ್ತಿದ್ದಾರೆ: ನಾನು ಮದುವೆಯಾದರೇ, ಅರೆಂಜ್ಡ್ ಮ್ಯಾರೇಜ್ ಆಗ್ತೀನಿ. ಸದ್ಯಕ್ಕೆ ಮನೆಯಲ್ಲಿ ಹುಡುಗನ ಹುಡುಕುತ್ತಿದ್ದಾರೆ. ಡ್ರೀಮ್ ಬಾಯ್ ಅಂತೇನು ಆಸೆಗಳು ಇಲ್ಲ. ನೋಡೋಣ ಕಂಕಣ ಭಾಗ್ಯ ಇದ್ದಾಗ ಮದುವೆ ಆಗುತ್ತೇನೆ. ಮೂಗು ಚುಚ್ಚಿಸಿರೋದಕ್ಕೂ ಮದುವೆಗೂ ಲಿಂಕ್ ಇಲ್ಲ ಎಂದರು.
ಅಭಿಮಾನಿಗಳ ಶುಭಾಶಯದ ಮಳೆ: ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಅಭಿಮಾನಿಗಳು #HappyBirthdayRachitaRam, #DimpleQueen ಹ್ಯಾಶ್‌ಟ್ಯಾಗ್‌ಗಳ ಮೂಲಕ ರಚಿತಾಗೆ ಶುಭಾಶಯ ಕೋರುತ್ತಿದ್ದಾರೆ. ಒಟ್ಟಾರೆ, ರಚಿತಾ ರಾಮ್ ಅವರ ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳಿಗೆ ದ್ವಿಗುಣ ಸಂತೋಷ ತಂದಿದೆ. ಒಂದು ಕಡೆ ಅವರ ಜನ್ಮದಿನದ ಹರ್ಷ, ಇನ್ನೊಂದು ಕಡೆ ಲ್ಯಾಂಡ್ ಲಾರ್ಡ್ ಸಿನಿಮಾದ ವಿಶೇಷ ವಿಡಿಯೋ ಬಿಡುಗಡೆ!