ಏಷ್ಯಾಕಪ್: ಭಾರತಕ್ಕೆ ಗೆಲುವಿನ ಸಿಂಧೂರವಿಟ್ಟ ತಿಲಕ

0
6

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಬದ್ಧವೈರಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿ ಹಿಡಿದು ಇತಿಹಾಸ ಸೃಷ್ಟಿಸಿತು.


ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ತಂಡವು ಪಾಕಿಸ್ತಾನದೊಂದಿಗೆ ‘ನೋ ಹ್ಯಾಂಡ್ ಶೇಕ್’ ಮೌನ ಪ್ರತಿಭಟನೆ ನಡೆಸಿತು. ಮೈದಾನದಲ್ಲಿ ಅಸಾಧಾರಣ ಕ್ರಿಕೆಟ್ ಪ್ರದರ್ಶನ ನೀಡಿದ ಭಾರತ, ತನ್ನ ಶತ್ರುಗಳಿಗೆ ಬ್ಯಾಟ್ ಮತ್ತು ಬಾಲ್ ಮೂಲಕವೇ ತಕ್ಕ ಉತ್ತರ ನೀಡಿತು.


ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು. ಪಾಕಿಸ್ತಾನದ ಆರಂಭಿಕ ಬ್ಯಾಟರ್‌ಗಳಾದ ಸಾಹಿಬ್‌ಝಾದಾ ಫರ್ಹಾನ್ (38 ಎಸೆತಗಳಲ್ಲಿ 57 ರನ್) ಮತ್ತು ಫಖರ್ ಜಮಾನ್ (35 ಎಸೆತಗಳಲ್ಲಿ 46 ರನ್) ಉತ್ತಮ ಆರಂಭ ನೀಡಿದರೂ, ಭಾರತದ ಬೌಲರ್‌ಗಳು ಅದರಲ್ಲೂ ವಿಶೇಷವಾಗಿ ಸ್ಪಿನ್ನರ್‌ಗಳು ಪಂದ್ಯದ ಗತಿಯನ್ನು ಬದಲಾಯಿಸಿದರು.


‘ಚೈನಾಮನ್’ ಕುಲದೀಪ್ ಯಾದವ್ ತಮ್ಮ 4 ಓವರ್‌ಗಳಲ್ಲಿ 30 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿ ಪಾಕ್ ತಂಡದ ಬೆನ್ನಲುಬು ಮುರಿದರು. ಅಕ್ಷರ್ ಪಟೇಲ್ ,’ಮಿಸ್ಟರಿ ಸ್ಪಿನ್ನರ್’ ವರುಣ್ ಚಕ್ರವರ್ತಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ತಲಾ ಎರಡು ವಿಕೆಟ್ ಪಡೆದು ಪಾಕಿಸ್ತಾನವನ್ನು 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಮಾಡಿದರು.


ಪಾಕ್ ತಂಡದ ಎಂಟು ವಿಕೆಟ್‌ಗಳು ಭಾರತದ ಸ್ಪಿನ್ನರ್‌ಗಳ ಪಾಲಾಗಿದ್ದು, ಈ ಪಂದ್ಯದಲ್ಲಿ ಸ್ಪಿನ್ನರ್‌ಗಳ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ.
147 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ 5 ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ ಭಾರತ 20 ಓವರ್‌ಗಳಲ್ಲಿ 150 ರನ್ ಗಳಿಸಿ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರ ಅದ್ಭುತ ಜೊತೆಯಾಟ ತಂಡಕ್ಕೆ ಆಧಾರವಾಯಿತು.


ಟೂರ್ನಿಯಲ್ಲಿ ಆಡಿದ್ದು ಒಂದೇ ಎಸೆತ: ಸಂಪೂರ್ಣ ಟೂರ್ನಿಯಲ್ಲಿ ಆಡಿದ್ದು ಒಂದೇ ಒಂದು ಎಸೆತವಾದರೂ, ಅದೇ ನಿರ್ಣಾಯಕ ಎಸೆತವಾಗಿತ್ತು. ಭಾರತಕ್ಕೆ ಕೊನೆಯ ಎಸೆತದಲ್ಲಿ ಗೆಲ್ಲಲು 3 ರನ್ ಅಗತ್ಯವಿದ್ದಾಗ, ರಿಂಕು ಸಿಂಗ್ ಬದಲಾಗಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಂಡಕ್ಕೆ ರೋಮಾಂಚಕಾರಿ ಜಯ ತಂದುಕೊಟ್ಟರು. ಇದು 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಎದುರಾಗಿದ್ದು ಇದೇ ಮೊದಲು ಎಂಬುದು ಗಮನಾರ್ಹ.


ಕೇವಲ 6 ತಿಂಗಳ ಹಿಂದೆ ದುಬೈನಲ್ಲಿ ಏಕದಿನ ಮಾದರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದಿದ್ದ ಟೀಂ ಇಂಡಿಯಾ, ಇದೀಗ ಟಿ20 ಮಾದರಿಯ ಏಷ್ಯಾಕಪ್‌ನಲ್ಲಿಯೂ ವಿಕ್ರಮ ಮೆರೆದು ಭಾರತೀಯ ಕ್ರಿಕೆಟ್‌ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಕುಲದೀಪ್ ಯಾದವ್ ಉತ್ತಮ ಬೌಲಿಂಗ್ ಮತ್ತು ತಿಲಕ್ ವರ್ಮಾ ಅಪ್ರತಿಮ ಬ್ಯಾಟಿಂಗ್ ಪ್ರದರ್ಶನವು ಭಾರತದ ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಯಿತು.

ಸ್ಕೋರ್ ವಿವರ:

ಪಾಕಿಸ್ತಾನ 19.1 ಓವರ್‌ನಲ್ಲಿ 146 ರನ್
ಶಹಬ್ಜಾದಾ ಫರ್ಹನ್ 57 (38)
ಫಖರ್ ಜಮಾನ್ 46 (35)
ಸಯೀಂ ಅಯೂಬ್ 14 (11)
ಎಂ. ಹ್ಯಾರೀಸ್ 00 (02)
ಸಲ್ಮಾನ್ ಅಘಾ 08 (07)
ಹುಸೇನ್ ತಲತ್ 01 (02)
ಎಂ. ನವಾಜ್ 06 (09)
ಶಾಹೀನ್ ಅಫ್ರಿದಿ 00 (೦3)
ಫಹೀಮ್ ಅಶ್ರಫ್ 00 (೦2)
ಹ್ಯಾರೀಸ್ ರೌಫ್ 06 (04)
ಅಬ್ರಾರ್ ಅಹ್ಮದ್ 01 (02)

ಭಾರತ 19.4 ಓವರ್‌ಗಳಲ್ಲಿ 150/5
ಅಭಿಷೇಕ್ ಶರ್ಮಾ 05(06)
ಶುಭಮನ್ ಗಿಲ್ 12(10)
ಸೂರ್ಯಕುಮಾರ್ 01(05)
ತಿಲಕ್ (ಅಜೇಯ) 69(53)
ಸಂಜು ಸ್ಯಾಮ್ಸನ್ 24 (21)
ಶಿವಂ ದುಬೆ 33 (22)
ರಿಂಕು ಸಿಂಗ್ (ಅಜೇಯ) 04 (01)

Previous articleಏಷ್ಯಾಕಪ್ ಕ್ರಿಕೆಟ್: ಭಾರತಕ್ಕೆ ಗೆಲುವಿನ ತಿಲಕ

LEAVE A REPLY

Please enter your comment!
Please enter your name here