ಹೊಸಪೇಟೆ: ಅಡುಗೆ ಸಿಲಿಂಡರ್ ಸ್ಫೋಟ – 8 ಜನರಿಗೆ ಗಾಯ

0
36

ಹೊಸಪೇಟೆ : ಅಡುಗೆ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ 8 ಜನರಿಗೆ ಗಾಯವಾಗಿ ಇಬ್ಬರ ಸ್ಥಿತಿಗಂಭೀರವಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಗಾದಿಗನೂರಿನಲ್ಲಿ ಶನಿವಾರ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ 8 ಮಂದಿ ಗಾಯಗೊಂಡಿದ್ದಾರೆ.

ವಕೀಲ ಹಾಲಪ್ಪ, ಸಹೋದರ ಮೈಲಾರಪ್ಪ ಸೇರಿದಂತೆ ಒಂದೇ ಕುಟುಂಬ ದ 8 ಜನರಿಗೆ ಗಾಯ ಗೊಂಡಿದ್ದು, ಗಾಯಾಳುಗಳನ್ನು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಹೊಸಪೇಟೆ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆಯಾಗಿದೆ. ಮನೆಯಲ್ಲಿ ಸುಮಾರು 10 ಮಂದಿ ಇದ್ದರು. ಬೆಳಿಗ್ಗೆ ಅಡುಗೆ ಅನಿಲ ಸೋರಿಕೆಯ ವಾಸನೆ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಯೇ ಕುಸಿದಿದೆ.

ಸಿಲಿಂಡರ್ ಸಿಡಿದು ಹಾಲಪ್ಪ ವಕೀಲರು(42) ,ಹೆಂಡತಿ ಕವಿತಾ ವಯಸ್ಸು 32. ಗಂಗಮ್ಮ ತಾಯಿ 63, ಮೈಲಾರಪ್ಪ48, ಮಲ್ಲಮ್ಮ ಗಾಯಾಳು ಗಳು ಸಂಜೀವಿನಿ ಅಸ್ಪತ್ರೆ ತೊರಣಗಲ್ಲುಗೆ ದಾಖಾಲು ಅಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ, ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ

ಬೆಳಿಗ್ಗೆ ಸ್ಟವ್‌ ಹಚ್ಚಲು ಕವಿತಾ ಯತ್ನಿಸಿದಾಗ ಏಕಾ ಏಕಿ ಬೆಂಕಿ ಹತ್ತಿಕೊಂಡಿತು. ಸ್ಫೋಟದಿಂದ ಮನೆ ಶೇ 50ರಷ್ಟು ಧ್ವಂಸವಾಗಿದೆ. ಕವಿತಾ ಅವರಲ್ಲದೆ, ಹಾಲಪ್ಪ, ಮೈಲಾರಪ್ಪ, ಗಂಗಮ್ಮ, ಮಲ್ಲಮ್ಮ, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಹೊಸಪೇಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದರು.

Previous articleವಿಶ್ವ ಪ್ರವಾಸೋದ್ಯಮ ದಿನ ಸೆ. 27: ಜಗವನು ಅರಿತು, ಮನವನು ಬೆಳಗುವ ಪಯಣ
Next articleಗಗನದಿಂದ ಗತಕ್ಕೆ: ವಾಯುಪಡೆಯ ಪರಾಕ್ರಮಿ ಮಿಗ್-21 ಯುಗಾಂತ್ಯ

LEAVE A REPLY

Please enter your comment!
Please enter your name here