ದಾಂಡೇಲಿ: ನಮ್ಮ ಉತ್ಸವ, ನಮ್ಮ ಹಬ್ಬ – ನವರಾತ್ರಿ ಉತ್ಸವಕ್ಕೆ ಚಾಲನೆ

0
8

ದಾಂಡೇಲಿ: ಜನತೆಗೆ ವಿಶಿಷ್ಟ ಮತ್ತು ವಿನೂತನ ಧಾರ್ಮಿಕ ಮತ್ತು ಮನರಂಜನಾ ಕಾರ್ಯಕ್ರಮ ನೀಡಬೇಕೆನ್ನುವ ಉದ್ದೇಶದಿಂದ ದಾಂಡೇಲಿಯ ಹಳೇ ನಗರಸಭಾ ಮೈದಾನದಲ್ಲಿ ನವರಾತ್ರಿ ಉತ್ಸವವನ್ನು ನಮ್ಮ ಉತ್ಸವ, ನಮ್ಮ ಹಬ್ಬ, ಘೋಷವಾಕ್ಯದಡಿ ಇಂದು (ಸೋಮವಾರ) ದುರ್ಗಾ ದೇವಿಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಮಾಜಿ ಶಾಸಕ ಸುನೀಲ ಹೆಗಡೆ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದ ಮತ್ತು ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಉತ್ಸವದ 9 ದಿನಗಳಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಯೋಜಿಸಲಾಗಿದೆ. ಸಾರ್ವಜನಿಕರು ಮತ್ತು ಕಲಾಭಿಮಾನಿಗಳು ದುರ್ಗಾ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ಈ ಭಾಗದ ಜನರಿಗೆ ತೊಂದರೆಯಾಗಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನವರಾತ್ರಿ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಪ್ರತಿ ನಿತ್ಯ 10 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಗುತ್ತದೆಂದು ನುಡಿದರು.

Previous articleಮೂರನೇ “ದೃಶ್ಯ”ಕ್ಕೆ ಮುಹೂರ್ತ
Next articleBengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್

LEAVE A REPLY

Please enter your comment!
Please enter your name here