ದಾಂಡೇಲಿ: ಇಂದು ಅಖಿಲ ಭಾರತೀಯ ಹಾಗೂ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಷ್ಟೆ ಅಲ್ಲದೇ ರಾಷ್ಟ್ರ ಅಂತರಾಷ್ತ್ರೀಯ ಬದಲಾಗುತ್ತಿರುವ ವಿದ್ಯಮಾನಗಳ ತಿಳುವಳಿಕೆ ರಾಜ್ಯಶಾಸ್ತ್ರ ವಿಷಯದ ಅಧ್ಯಯನ ಮತ್ತು ವಿಷಯದಲ್ಲಿ ಆಸಕ್ತಿಯನ್ನು ಹೊಂದುವದು ತುಂಬಾ ಅನಿವಾರ್ಯವಾಗಿದೆ ಎಂದು ಸ್ಥಳೀಯ ಬಂಗೂರನಗರ ಪದವಿ ಮಹಾವಿದ್ಯಾಲಯದ ಸಹ ಪ್ರಾಚಾರ್ಯರಾದ ಪ್ರೊ.ಎಸ್.ಎಸ್.ಹಿರೇಮಠ ನುಡಿದರು.
ಅವರು ಇಂದು ಜನತಾ ವಿದ್ಯಾಲಯ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಮತ್ತು ಜನತಾ ವಿದ್ಯಾಲಯ ಹಾಗೂ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪ್ರುನಶ್ಚೇತನ ತರಬೇತಿ ಕಾರ್ಯಗಾರದಲ್ಲಿ ರಾಜ್ಯಶಾಸ್ತ್ರ ವಿಷಯದ ಮಹತ್ವ ಮತ್ತು ವಿದ್ಯಾರ್ಥಿಗಳಲ್ಲಿ ಈ ವಿಷಯದ ಆಸಕ್ತಿಯನ್ನು ಬೆಳೆಸುವ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.
ಜನತಾ ವಿದ್ಯಾಲಯದ ಆಡಳಿತಾಧಿಕಾರಿ ರೀಟಾ ಎಂ. ಡಾಯಸ್ ಉದ್ಘಾಟಿಸಿದರು. ಪ್ರಾಚಾರ್ಯ ಅಮೃತ್ ರಾಮರಥ, ಸಂಘದ ಜಿಲ್ಲಾಧ್ಯಕ್ಷರಾದ ರಾಮಮೂರ್ತಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಗಾರದ ಸಂಘಟಕರಾದ ಹಿರಿಯ ಉಪನ್ಯಾಸಕ ಉಪೇಂದ್ರ ಘೋರ್ಪಡೆ ರಾಜ್ಯ ಶಾಸ್ತ್ರ ಕಾರ್ಯಾಗಾರದ ಮಹತ್ವ ತಿಳಿಸಿದರು.