ಬಾಗಲಕೋಟೆ: ಕಮತಗಿಯ ಪತ್ರಕರ್ತ ಪ್ರಕಾಶ ಗುಳೇದಗುಡ್ಡ(42) ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಳಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದರಿಂದ, ತಕ್ಷಣ ಅವರನ್ನು ಆಸ್ಪತ್ರೆಗಾಗಿ ಬಾಗಲಕೋಟೆಗೆ ಕರೆತರಲಾಯಿತು. ಆಸ್ಪತ್ರೆ ತಲುಪುವ ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿದೆ.
ಪ್ರಕಾಶ ಗುಳೇದಗುಡ್ಡ ಅವರು ಸಂಯಕ್ತ ಕರ್ನಾಟಕ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಪತ್ನಿ, ಪುತ್ರಿ, ಪುತ್ರ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಬೆಳಗಿನ ಜಾವ ಮನೆಯಲ್ಲಿ ಇದ್ದಾಗ ಎದೆ ನೋವು ಕಾಣಿಸಿ ಕೊಂಡಿದ್ದು, ತಕ್ಷಣ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಯಿತು.ಆಸ್ಪತ್ರೆ ತಲುಪುವ ಹೊತ್ತಿಗೆ ಜೀವ ಬಿಟ್ಟಿದ್ದಾರೆ.
ತಾವು ಕಲಿತ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸುವ ಸಿದ್ಧತೆಯಲ್ಲಿದ್ದ ಅವರು ಶಿಕ್ಷಕರ ದಿನಾಚರಣೆಯಂದು ಅಗಲಿ ಜೀವಗಳಿಗೆ ನಮನ ಎಂದು ತಮ್ಮ ಗುರುಗಳನ್ನು ನೆನದು ಭಾವುಕ ಪೋಸ್ಟ್ ಹಾಕಿದ್ದರು. ಅದನ್ನು ಹಾಕಿ ಕೆಲವೇ ಗಂಟೆಗಳಲ್ಲಿ ಅವರು ಜೀವ ಬಿಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಸೆ.5ರ ಸಂಜೆ 5 ಗಂಟೆಗೆ ಕಮತಗಿಯಲ್ಲಿ ಜರುಗಲಿದೆ.