ಶಾಸಕ ಪ್ರಕಾಶ ಕೋಳಿವಾಡ ಆಪ್ತ ಸಹಾಯಕ ಮನೆಯಲ್ಲಿ ಕಳ್ಳತನ

0
21

ಹಾವೇರಿ : ರಾಣೇಬೆನ್ನೂರು ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಆಪ್ತ ಸಹಾಯಕ ಶ್ರೀನಿವಾಸ್ ಹಳ್ಳಳಿ ಎಂಬುವವರು ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಸುಮಾರು 21. 30 ಲಕ್ಷ ರೂಗಲಕ ಬಂಗಾರ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕಂಠಿಬಿರೇಶ್ವರ ನಗರದಲ್ಲಿರುವ ಶಾಸಕರ ಆಪ್ತಸಹಾಯಕ ಶ್ರೀನಿವಾಸ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಶ್ರೀನಿವಾಸ ಹಳ್ಳಳ್ಳಿ ಕುಟುಂಬ ಮನೆಯಲ್ಲಿ ಇಲ್ಲದ ಸಮಯವನ್ನು ಹೊಂಚು ಹಾಕಿದ ಕಳ್ಳರು ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಮಾಂಗಲ್ಯಚೈನ್, ಬಂಗಾರದ ಮುತ್ತಿನ ಸರ, ಬಂಗಾರದ ನಾಣ್ಯ , ಬಂಗಾರದ ಕಿವಿ ಜುಮಕಿ , ಬಂಗಾರದ ಸಾದಾ ಚೈನ್, ಬಂಗಾರದ ಬೆರಳು ಉಂಗುರ, ಒಂದು ಬಂಗಾರದ ಮುತ್ತಿನ ಸರ ಸೇರಿದಂತೆ ಮನೆಯಲ್ಲಿದ್ದ 4,50,000/-ರೂ ನಗದು ಸೇರಿದಂತೆ ಒಟ್ಟು ಅಂದಾಜು 21.30,000/- ಕಳ್ಳತನ ಮಾಡಲಾಗಿದೆ. ಈ ಕುರಿತು ರಾಣೆಬೇನ್ನೂರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹುಬ್ಬಳ್ಳಿ: ಕ್ಯಾಸಿನೋ ಉದ್ಯಮಿ‌ ಮನೆ ಮೇಲೆ ಇಡಿ ದಾಳಿ
Next articleಆದಾಯ ತೆರಿಗೆ: ಮಧ್ಯಮ ವರ್ಗದಲ್ಲೇ ಅಚ್ಚರಿಯ ಅಸಮಾನತೆ

LEAVE A REPLY

Please enter your comment!
Please enter your name here