ಡಾಲಿ ಧನಂಜಯ್ ಹುಟ್ಟುಹಬ್ಬ: ಥಿಯೇಟರ್‌ನಲ್ಲಿ ಕಾರುಬಾರು

0
57

ಗೋಧಿ ಬಣ್ಣ… ಸಪ್ತ ಸಾಗರದಾಚೆ ಖ್ಯಾತಿಯ ಹೇಮಂತ್ ಎಂ ರಾವ್ ನಿರ್ದೇಶನದ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಆರಂಭದಿಂದಲೇ ಒಂದಷ್ಟು ಕುತೂಹಲ ಹೆಚ್ಚಿಸಿದೆ. ಶಿವರಾಜ್‌ ಕುಮಾರ್ ಹಾಗೂ ಧನಂಜಯ್ ಫಸ್ಟ್ಲುಕ್ ಹರಿ ಬಿಟ್ಟು ಗಮನ ಸೆಳೆದಿದ್ದ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ.

ಟಗರು, ಬೈರಾಗಿ ಸಿನಿಮಾ ಬಳಿಕ ಶಿವಣ್ಣ ಹಾಗೂ ಧನಂಜಯ್ ಒಟ್ಟಿಗೆ ನಟಿಸುತ್ತಿರುವ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡ, ಸದ್ಯ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಶಿವಣ್ಣ ಹಾಗೂ ಡಾಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ಈ ನಡುವೆ ಚಿತ್ರತಂಡ ಹೊಸ ಪೋಸ್ಟರ್ ಅನಾವರಣ ಮಾಡಿದ್ದು, ಧನಂಜಯ್ ಹುಟ್ಟು ಹಬ್ಬದ ವಿಶೇಷವಾಗಿ `…ಡ್ರೀಮ್ ಥಿಯೇಟರ್’ ಹೊಸ ಲುಕ್ ಹರಿಬಿಟ್ಟಿದೆ. ರೆಟ್ರೋ ಗೆಟಪ್‌ನಲ್ಲಿ ಧನಂಜಯ್ ಕಾಣಿಸಿಕೊಂಡಿದ್ದು, ಕೈಯಲ್ಲಿ ಗನ್ ಹಿಡಿದು ಕಾರಿನಲ್ಲಿ ಕನಸು ಕಾಣುತ್ತಾ ರೆಟ್ರೋ ಸ್ಟೈಲ್‌ನಲ್ಲಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.

ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲಂಸ್ ಬ್ಯಾನರ್ ಅಡಿಯಲ್ಲಿ `666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೆöÊತ ಗುರುಮೂರ್ತಿ ಛಾಯಾಗ್ರಹಣ ಹಾಗೂ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಈ ಸಿನಿಮಾಗಿದೆ.

ಈ ಭಾರಿ ಅಭಿಮಾನಿಗಳೊಂದಿಗೆ ಬರ್ತ್‌ ಡೇ ಸೆಲೆಬ್ರೇಷನ್ ಇಲ್ಲ: ನಟ ಧನಂಜಯ ಈ ಭಾರಿಯೂ ತಮ್ಮ ಜನುಮದಿನದ ಆಚರಣೆಗೆ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಈ ಕುರಿತಂತೆ ನಟ ಡಾಲಿ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ”ನನ್ನ ಪ್ರೀತಿಯ ಅಭಿಮಾನಿಗಳೇ, ಆಗಸ್ಟ್​ 23, ಪ್ರತೀ ವರ್ಷ ನನ್ನ ಬರ್ತ್​ಡೇ ಅಂದ್ರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ – ಅದೇ ನನ್ನ ಶಕ್ತಿ. ಆದ್ರೆ ಈ ಸಲ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬಲ್​ ಎನರ್ಜಿ, ಡಬಲ್​ ಸಂಭ್ರಮ, ಜೊತೆಗೆ ಆಚರಿಸೋಣ. ಲವ್​ ಯು ಆಲ್​​. ಪ್ರೀತಿಯಿಂದ ಡಾಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Previous articleಬಹು ನಿರೀಕ್ಷಿತ “45” ಚಿತ್ರ ಲೇಟಾದ್ರೂ ಲೇಟೆಸ್ಟ್‌ ಆಗಿ ಬರಲಿದೆ
Next articleಆಪರೇಷನ್ ಸಿಂದೂರ ಪಠ್ಯದಲ್ಲಿ ಪರಿಚಯಿಸಿದ ಎನ್‌ಸಿಇಆರ್‌ಟಿ

LEAVE A REPLY

Please enter your comment!
Please enter your name here