ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ ಪ್ರಮಾದವೊಂದು ನಡೆದು ಹೋಯಿತು. ಐಸಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಈ ರ‍್ಯಾಂಕಿಂಗ್‌ನಲ್ಲಿ ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಹೆಸರುಗಳೇ ಕೆಲ ಹೊತ್ತು ಮಂಗಮಾಯವಾಗಿತ್ತು.
ಒಂದು ವಾರದ ಹಿಂದೆ, ರೋಹಿತ್ ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದರು, ವಿರಾಟ್ ಕೊಹ್ಲಿಯೂ 4ನೇ ಸ್ಥಾನದಲ್ಲಿದ್ದರು. ರೋಹಿತ್ 756 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಕೊಹ್ಲಿ ಕೇವಲ 20 ಅಂಕಗಳ ಹಿಂದಿದ್ದರು. ಆದರೆ ಬುಧವಾರ ಈ ಇಬ್ಬರ ಹೆಸರುಗಳು ಮಾಯವಾಗಿದ್ದು, ಅಭಿಮಾನಿಗಳಲ್ಲಿ ಹಲವು ಗೊಂದಲ ಮೂಡಿಸಿತು.
ಐಸಿಸಿ ಹಲವಾರು ಬಾರಿ ಇಂತಹ ತಪ್ಪುಗಳನ್ನು ಮಾಡಿದೆ. 2023ರಲ್ಲಿ, ಐಸಿಸಿ ಪ್ರಕಟಿಸಿದಂತೆ ಭಾರತವು ಎಲ್ಲಾ ಸ್ವರೂಪಗಳಲ್ಲಿ ವಿಶ್ವದ ನಂಬರ್ ಒನ್ ತಂಡ ಎನ್ನಿಸಿಕೊಂಡಿತ್ತು. ಆದರೆ, ಮತ್ತೆ ಕೆಲ ಹೊತ್ತಿನ ನಂತರ ಬದಲಿಸಿತ್ತು. ಐಸಿಸಿ ರ‍್ಯಾಂಕಿಂಗ್‌ನಿಂದ ರೋಹಿತ್ ಕೊಹ್ಲಿ ಹೆಸರುಗಳು ಮಾಯವಾಗಿದ್ದರಿಂದ, ಈ ಇಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹಾಗಾಗಿ, ಈ ಇಬ್ಬರ ಹೆಸರುಗಳನ್ನು ಕೈ ಬಿಡಲಾಗಿದೆ ಎಂದೇ ವದಂತಿ ಹಬ್ಬಿತ್ತು.