ಬೆಂಗಳೂರು: ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ಅವರ ಬಹು ನಿರೀಕ್ಷಿತ “ಕೂಲಿ” ಚಿತ್ರವು ಬಿಡುಗಡೆ ಮನ್ನವೇ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಬುಕಿಂಗ್ ಆರಂಭವಾಗಿದ್ದು ವಿಶ್ವಾದ್ಯಂತ 50 ಕೋಟಿ ರೂ.ಗಳಿಗೂ ಹೆಚ್ಚು ಮುಂಗಡ ಬುಕಿಂಗ್ ಗಳಿಸಿದೆ ಎಂದು ವರದಿಯಾಗಿದೆ
ಪ್ಯಾನ್ ಇಂಡಿಯಾ ಸಿನಿಮಾ ಮಾದರಿಯಲ್ಲಿ ದೇಶ ವಿದೇಶದಲ್ಲೂ ಈ ಚಿತ್ರದ ಬಗ್ಗೆ ಹೈಪ್ ಹೆಚ್ಚಾಗಿದೆ. ಬಾಕ್ಸಾಫೀಸ್‌ನಲ್ಲಿ ಮೊದಲ ದಿನವೇ 100 ಕೋಟಿ ಗಳಿಕೆ ಕಾಣುವ ಮುನ್ಸೂಚನೆ ನೀಡುತ್ತಿದೆ. ‘ಜೈಲರ್’ ಬಳಿಕ ರಜಿನಿಕಾಂತ್ ಗೆ ‘ಕೂಲಿ’ ಬಿಗ್ ಹಿಟ್ ತಂದುಕೊಡುವ ಸಾಧ್ಯತೆಯಿದೆ ಇದೆ. ಬಹು ನಿರೀಕ್ಷಿತ “ಕೂಲಿ” ಚಿತ್ರವು ಆಗಸ್ಟ್ 14, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ದಿಗ್ಗಜರ ತಾರಾಗಣ: ಕೂಲಿ ಚಿತ್ರದಲ್ಲಿ ಆಮಿರ್ ಖಾನ್ ಸೇರಿದಂತೆ ರಜನಿಕಾಂತ್, ನಾಗಾರ್ಜುನ, ಅಮೀರ್ ಖಾನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಮುಂತಾದ ದಿಗ್ಗಜರ ತಾರಾಗಣದ ಗಮನಾರ್ಹ ತಾರಾಗಣವನ್ನು ಹೊಂದಿದೆ. ಉತ್ತರ ಅಮೆರಿಕಾ ಮತ್ತು ತಮಿಳುನಾಡಿನಂತಹ ಪ್ರದೇಶಗಳಲ್ಲಿ ಹೆಚ್ಚಿನ ಪೂರ್ವ ಮಾರಾಟವನ್ನು ಹೊಂದಿದೆ, ಮುನ್ಸೂಚನೆಗಳು ಮತ್ತಷ್ಟು ಬೆಳವಣಿಗೆಯನ್ನು ಸೂಚಿಸುತ್ತವೆ.
ರಜನಿ ಚಿತ್ರಕ್ಕೆ A ಪ್ರಮಾಣಪತ್ರ: ಮೂವತ್ತು ವರ್ಷಗಳ ನಂತರ ರಜನಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ A ಪ್ರಮಾಣಪತ್ರ ನೀಡಿದೆ, 18 ವರ್ಷ ಮೇಲ್ಪಟ್ಟ ವರಿಗಷ್ಟೇ ವೀಕ್ಷಣೆಗೆ ಅವಕಾಶವಿದೆ. ಈ ಚಿತ್ರದಲ್ಲಿ ಹಿಂಸೆ ಎಷ್ಟರ ಮಟ್ಟಿಗೆ ಇರಲಿದೆ ಎಂಬುದನ್ನು ಊಹಿಸಬಹುದಾಗಿದೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಈ ಚಿತ್ರದಲ್ಲಿ ಮಾಫಿಯಾ ಡಾನ್ ಆಗಿ ರಜನಿಕಾಂತ್ ಗೆ ವಿಲನ್ ಆಗಿ ನಾಗಾರ್ಜುನ ಅಬ್ಬರಿಸಿದ್ದಾರೆ.
ಉದ್ಯೋಗಿಗಳಿಗೆ ರಜೆ ನೀಡಿದ ಕಂಪನಿ: ಮಧುರೈನ ಯುಎನ್ ಅಕ್ವಾ ಕೇರ್ – ಆರ್‌ಒ ಸಿಸ್ಟಮ್ಸ್ ಮತ್ತು ಸೇಲ್ಸ್ ಕಂಪನಿಯು ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ಕೂಲಿ ಸಿನಿಮಾ ವೀಕ್ಷಣೆ ಸಲುವಾಗಿ ಆ ದಿನ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ನೀಡಿ, ಸಿನಿಮಾ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಜತೆಗೆ ಉಚಿತ ಟಿಕೆಟ್‌ಗಳನ್ನು ಒದಗಿಸಲು ಮುಂದಾಗಿದೆ. ರಜನಿಕಾಂತ್ ಅವರ 50 ವರ್ಷಗಳ ಸಿನಿ ಪ್ರಯಣವನ್ನೂ ಶ್ಲಾಘಿಸಿ, ಅವರ ಹೆಸರಿನಲ್ಲಿ ಅನಾಥರಿಗೆ ಊಟ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಸುಮಾರು 375 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ರಜನಿಕಾಂತ್ ಅಭಿನಯದ ಈ ಚಿತ್ರವು ಈಗಾಗಲೇ ತನ್ನ ಅಂತರರಾಷ್ಟ್ರೀಯ, ಡಿಜಿಟಲ್, ಸಂಗೀತ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ 250 ಕೋಟಿ ರೂ. ಗಳಿಸಿದೆ. ಚಿತ್ರದ ಅಂತರರಾಷ್ಟ್ರೀಯ ಹಕ್ಕುಗಳು ಸುಮಾರು 68 ಕೋಟಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ‘ಕೂಲಿ’ ಸಿನಿಮಾ ನಿರ್ಮಾಣ ಮಾಡಿದೆ. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದು ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಹಾಡುಗಳು ಬಹುತೇಕ ಹಿಟ್ ಆಗಿವೆ.