ದಿ ಓವಲ್: ಮೊಹಮ್ಮದ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅತ್ಯುತ್ತಮ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ತಂಡವನ್ನು ಭಾರತ 247 ರನ್‌ಗಳಿಗೆ ಆಲೌಟ್ ಆಗಿದೆ.
ಮೊದಲ ಬ್ಯಾಂಟಿಗ್ ಮಾಡಿದ್ದ ಭಾರತವನ್ನು ಆಂಗ್ಲರು ಕೇವಲ 224 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಇಳಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರರು ಉತ್ತಮ ಆರಂಭವನ್ನು ನೀಡಿದರಾದರೂ ಮುಂದೆ ಬಂದ ಯಾವೊಬ್ಬ ಆಟಗಾರನು ಗಟ್ಟಿಯಾಗಿ ನಿಲ್ಲದೆ ಪೆವಿಲಿಯನ್ ಪರೇಡ್ ನಡೆಸಿದರು.
ಒಟ್ಟಾರೆ ಮಳೆಯ ಅಡೆತಡೆಗಳ ಮಧ್ಯೆಯೂ ದಿ ಓವಲ್ ಟೆಸ್ಟ್ 2ನೇ ದಿನವೇ ಎರಡು ತಂಡಗಳ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 224 ರನ್‌ಗಳಿಗೆ ತನ್ನ ಪಾಳಿಯನ್ನು ಮುಗಿಸಿದರೆ, ಇಂಗ್ಲೆಂಡ್ ಕೂಡ 23 ರನ್ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದು, ಭಾರತೀಯ ವೇಗಿಗಳಿಗೆ ವಿಕೆಟ್ 247 ರನ್‌ಗಳಿಗೆ ಸರ್ವಪತನ ಕಂಡಿತು. ಹಾಗಾಗಿ, 2ನೇ ದಿನ ಇಂಗ್ಲೆಂಡಿನ ಬ್ಯಾಟರ್‌ಗಳಿಗಿಂತ ತಲಾ 4 ವಿಕೆಟ್‌ಗಳು ಪಡೆದ ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಗೌರವ ತಂದುಕೊಟ್ಟರು.
ಮೊದಲ ದಿನ 204 ರನ್ ಗಳಿಸಿದ್ದ ಭಾರತ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, 2ನೇ ದಿನದಾಟದ ಮೊದಲ ಸೆಷನ್‌ನಲ್ಲಿ ಕೇವಲ 34 ಎಸೆತಗಳನ್ನಷ್ಟೇ ಎದುರಿಸಿದ ಭಾರತ ತನ್ನ ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು. 2ನೇ ದಿನದಲ್ಲಿ ಅಟ್ಕಿನ್ಸನ್‌ರ ದಾಳಿ ಎದುರು ಭಾರತದ ಬಾಲಂಗೋಷಿಗಳು ಪ್ರತಿರೋಧ ತಾಳಲು ಸಾಧ್ಯವಾಗಲಿಲ್ಲ. ಅರ್ಧಶತಕ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಕರುಣ್ ನಾಯರ್(58)ರ ವಿಕೆಟ್‌ನೊಂದಿಗೆ ಭಾರತದ ಪತನ ಆರಂಭವಾಯಿತು. 218ಕ್ಕೆ 7 ವಿಕೆಟ್ ಕಳೆದುಕೊಂಡ ಭಾರತ 7 ರನ್‌ಗಳ ಅಂತರದಲ್ಲಿ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (26), ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಶೂನ್ಯ ಸುತ್ತಿ ವಿಕೆಟ್ ನೀಡಿದರು. ಇದರಿಂದ ಭಾರತ ಕೇವಲ 224 ರನ್‌ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು.
ಸಾಧಾರಣ ಮೊತ್ತಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ ಅಬ್ಬರದ ಆರಂಭ ಕಂಡಿತು. ಆರಂಭಿಕರಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾವ್ಲೆ 92 ರನ್‌ಗಳಿಸಿ ಭದ್ರಬುನಾದಿ ಹಾಕಿದರು. 43 ರನ್‌ಗಳಿಸಿದ ಬೆನ್ ಡಕೆಟ್‌ರನ್ನು ಆಕಾಶ್ ದೀಪ್ ಔಟ್ ಮಾಡಿ ಸಂಭ್ರಮಿಸಿದರು. ಜ್ಯಾಕ್ ಕ್ರಾವ್ಲೆ 64 ರನ್‌ಗಳಿಸಿ ಕೃಷ್ಣನಿಗೆ ಔಟಾದರು. ಇದಾದ ಬಳಿಕ ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಚಹಾ ವಿರಾಮಕ್ಕೂ ಮುನ್ನ ಇಂಗ್ಲೆಂಡ್‌ಗೆ ಕಂಟಕರಾದರು. ತನ್ನ ವೇಗದ ಬೌಲಿಂಗ್ ಮೂಲಕ ಹೆಚ್ಚು ಎಲ್‌ಬಿ ಮೂಲಕವೇ ವಿಕೆಟ್ಸ್ ಸಂಪಾದಿಸಿದ ಸಿರಾಜ್ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರು. ಇದಕ್ಕೆ ಸಾಥ್ ನೀಡಿದ ಪ್ರಸಿದ್ಧ್ ಕೃಷ್ಣ ಕೂಡ 4 ವಿಕೆಟ್ ಸಂಪಾದಿಸಿದರು. ಹ್ಯಾರಿ ಬ್ರೂಕ್ 53 ರನ್‌ಗಳಿಸಿ ಕೊನೆಯವರಾಗಿ ಔಟಾದರು. ಕ್ರಿಸ್ ವೋಕ್ಸ್ ಪಂದ್ಯದಿಂದ ಹೊರಗುಳಿದಿರುವುದರಿಂದ ಇಂಗ್ಲೆಂಡ್ ಕೇವಲ 10 ಮಂದಿ ಬ್ಯಾಟಿಂಗ್ ನಡೆಸಿದರು.