ಇನ್ ಮೇಲೆ ನಿದ್ರೆ ಸ್ವಲ್ಪ ಕಷ್ಟ ಆಗ್ಬೋದು…ಒಳ್ಳೆ ಹುಡ್ಗ ಪ್ರಥಮ್!

0
56

ಬೆಂಗಳೂರು: ದರ್ಶನ್ ಅಭಿಮಾನಿಗಳು ಹಾಗೂ ನಟಿ ರಮ್ಯಾ ಮತ್ತು ನಟ ಪ್ರಥಮ್ ಜಟಾಪಟಿ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಆರೋಪ ಪ್ರತ್ಯಾರೋಪಗಳು ಈಗ ಕಾನೂನು ಹೋರಾಟಕ್ಕೂ ಕಾರಣವಾಗಿವೆ.

ಮಂಗಳವಾರ ನಟ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಕುತೂಹಲಕ್ಕೆ ಕಾರಣವಾಗಿದೆ. ‘ಸ್ವಲ್ಪ ಸಮಯ ಕೊಡಿ, ನಾವು ಬಾಡಿಗೆ ಕಟ್ಟುತೀವಾ ಇಲ್ಲಾ ಕಟ್ಟುಸ್ತೀವಾ ಎಲ್ಲಾ ಗೊತ್ತಾಗುತ್ತೆ!’ ಎಂದು ಬರೆದಿದ್ದಾರೆ.

ನಟ ಪ್ರಥಮ ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆ ಯತ್ನ ಮಾಡಿದರು ಎಂಬ ಆರೋಪಕ್ಕೆ ದರ್ಶನ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಪ್ರಥಮ್ ಮೇಲೆ ಹಲ್ಲೆ ಪ್ರಕರಣದ ಸತ್ಯ ಹೊರಬಂದಿದ್ದು, ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು, ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ, ಖಾರ ಬನ್ ತಿಂದ ಪ್ರಕರಣವಿದು ಎಂದು ಪ್ರಥಮ್‌ಗೆ ಟಾಂಗ್‌ ನೀಡಿದ್ದರು.

ಇನ್ನೂ ಹಲ್ಲೆಯ ನಂತರ ಪೊಲೀಸರಿಗೆ ದೂರು ನೀಡದಿರಲು ಕಾರಣವೇನು? ಎಂದು ಪ್ರಶ್ನಿಸಿದ್ದು, ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ. ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ.

ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ. ಹೇಗಿದ್ರೂ ನೀವು ನಿರ್ದೇಶಕರು ಅಲ್ಲವೇ ಸ್ವಾಮಿ. ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ ಎಂದು ರೇಗಿಸಿದ್ದಾರೆ.

ಇನ್ನು ನಟ ಪ್ರಥಮ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡುವ ಮೂಲಕ ಉತ್ತರ ನೀಡುತ್ತಿದ್ದಾರೆ, ಕಳೆದರಾತ್ರಿ “Morning ತನಕ time ಇದೆ! ಸುಳ್ಳು ಸುದ್ಧಿ ನಿಲ್ಲಿಸಿದ್ರೆ ಸರಿ!ನಾಳೆ ಅಧಿಕೃತವಾಗಿ SP ತಪ್ಪು ಮಾಡಿದವರ ಮೇಲೆactionತಗೊಳೋ ತನಕ ಸುಮ್ಮನಿದ್ರೆ ಸರಿ! ನಾನು ಸುಮ್ಮನಿದ್ರೂsocial mediaಲಿ ಏನೇನೋ ಹಾಕ್ತಿದೀರಾ! ಹೀಗೇ ಸುಳ್ಳು ಸುದ್ಧಿ ಹಬ್ಬಿಸ್ತಾ ಇದ್ರೆ ಯಾವ ನಟರcompany ಆ ನಟರ ಮೇಲೆ FIR ಮಾಡ್ತೀನಿ; ನನ್ನ ಪಾಡಿಗೆ ಸುಮ್ನೆ ಬಿಟ್ಟುಬಿಡಿ!” ಎಂದು ಎಚ್ಚರಿಸಿದ್ದರು.

ಮಂಗಳವಾರದ ಪೋಸ್ಟ್: ಮಂಗಳವಾರ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಪ್ರಥಮ್, “ಎಲ್ಲರೂ ನೆನ್ನೆ ನೆಮ್ಮದಿಯಾಗಿ ಮಲಗಿದ್ದು ಎದ್ರಾ? ಸಂತೋಷ! ಇನ್ಮೇಲೆ ಸ್ವಲ್ಪ ನಿದ್ರೆ ಕಷ್ಟ ಆಗ್ಬೋದು! ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ ಈ ಸಲ ತಗೊಳೋ step complaintಥರ ಇರಲ್ಲ! ನನ್ನ triggerಮಾಡಿದ ಪರಿಣಾಮ ನಿಮ್ಮ ದೊಡ್ಡ ನಟರಿಗೆ ತಟ್ಟಲಿದೆ! ಸ್ವಲ್ಪ ಸಮಯ ಕೊಡಿ,ನಾವು ಬಾಡಿಗೆ ಕಟ್ಟುತೀವಾ ಇಲ್ಲಾ ಕಟ್ಟುಸ್ತೀವಾ ಎಲ್ಲಾ ಗೊತ್ತಾಗುತ್ತೆ” ಎಂದು ಎಚ್ಚರಿಸಿದ್ದಾರೆ.

ಸಮಾಜಕ್ಕೆ ಮನರಂಜನೆ ಹಾಗೂ ಮಾರ್ಗದಶರ್ನದ ತಾಣವಾಗಬೇಕಿದ್ದ ಸಾಮಾಜಿಕ ಜಾಲತಾಣಗಳು, ನಿಂದನೆ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾನಸಿಕ ಸ್ಥಿತಿಗಳನ್ನು ಸಂಕುಚಿತ ಮಾಡುತ್ತಿರುವುದು ಅಪಾಯಕರಿಯೇ ಸರಿ.

ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ವಿರುದ್ಧ ಸಹ ಕೆಟ್ಟ ಕಮೆಂಟ್‌ಗಳನ್ನು ಮಾಡುತ್ತಿದ್ದು, ಈ ಕುರಿತು ರಮ್ಯಾ ದೂರು ದಾಖಲಿಸಿದ್ದಾರೆ. ಆದ್ದರಿಂದ ಕಾನೂನು ಹೋರಾಟ ಆರಂಭವಾಗಿದೆ.

Previous articleದಕ್ಷಿಣ ಕನ್ನಡಕ್ಕೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಯೋಜನೆ ವಿವರ ತಿಳಿಯಿರಿ
Next articleನಿಪುಣ ಕರ್ನಾಟಕ: ಪದವೀಧರರಿಗೆ ಉದ್ಯೋಗಾವಕಾಶ

LEAVE A REPLY

Please enter your comment!
Please enter your name here