ಗೋಕಾಕ ಮಹಾಲಕ್ಷ್ಮೀ ಜಾತ್ರೆಗೆ ಮೂವರು ಬಿಜೆಪಿ ರೆಬಲ್ಸ್ ನಾಯಕರ ಆಗಮನ

ಬೆಳಗಾವಿ: ಜಿಲ್ಲೆಯ ಗೋಕಾಕ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವಕ್ಕೆ ಮೂವರು ಬಿಜೆಪಿ ರೆಬಲ್ ನಾಯಕರ ಆಗಮನ ವಿಶೇಷ ಆಕರ್ಷಣೆಯಾಗಿದೆ. ಇಂದು ಸಂಜೆ ಬೆಳಗಾವಿಗೆ ಆಗಮಿಸಿದ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಮಾಜಿ ಶಾಸಕ ಕುಮಾರ್ ಬಂಗಾರಪ್ಪ. ಜಾತ್ರೆಯ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಹ್ವಾನದ ಮೇರೆಗೆ ಅವರು ಗೋಕಾಕಕ್ಕೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, “ಮಹಾಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ನಾವು ಎಲ್ಲರೂ ಒಟ್ಟಿಗೆ ಬಂದಿದ್ದೇವೆ. ರಮೇಶ್ ಜಾರಕಿಹೊಳಿ ಆಹ್ವಾನ ಕೊಟ್ಟಿದ್ದರಿಂದ ಭಕ್ತಾದಿಗಳಾಗಿ ದರ್ಶನಕ್ಕೆ ಹೊರಟಿದ್ದೇವೆ” ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದ ಬಗ್ಗೆ ಕುಮಾರ ಬಂಗಾರಪ್ಪ ಅವರು “ಕಾಲ ಎಲ್ಲವನ್ನೂ ಉತ್ತರಿಸುತ್ತೆ. ನಾವು ನೀವು ಕಾಲಕ್ಕಾಗಿ ಕಾಯುತ್ತಿದ್ದೇವೆ” ಎಂದು‌ ಮಾರ್ಮಿಕವಾಗಿ ಹೇಳಿದರು.