ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಭಿನಯ ಚಕ್ರವರ್ತಿಯ ಹೊಸ ಸಿನಿಮಾ ಘೋಣೆಯಾಗಿದೆ. ಅಲ್ಲದೇ ಈ ಚಿತ್ರ ಈ ವರ್ಷದ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಲಿದೆ.
ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಕೆ 47 ಎಂದು ಹೆಸರು ಇಡಲಾಗಿದೆ. ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಶನಿವಾರ ಹೊಸ ಚಿತ್ರದ ಘೋಷಣೆ ಮಾಡಲಾಗಿದೆ.
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ವಿಜಯ್ ಕಾರ್ತೀಕೇಯ ಕೆ 47ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜುಲೈ 7ರಿಂದ ಶೂಟಿಂಗ್ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ.
ಕಿಚ್ಚ ಸುದೀಪ್ ಅವರ ‘ಬಿಲ್ಲ ರಂಗ ಬಾಷ’ ಚಿತ್ರದ ಈಗಾಗಲೇ ಘೋಷಣೆಯಾಗಿದೆ, ಇದರ ಶೂಟಿಂಗ್‌ನಲ್ಲಿ ಅವರು ಬ್ಯುಸಿ ಇದ್ದಾರೆ. ಇದರ ಜೊತೆಗೆ ಕನ್ನಡದ ಖಾಸಗಿ ವಾಹಿನಿ ನಡೆಸುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಅವರು ಮಾಡಲಿದ್ದಾರೆ. ಇದರ ನಡುವೆಯೇ ಹೊಸ ಚಿತ್ರದ ಘೋಷಣೆಯಾಗಿದೆ.
ಕೆ 47 ಚಿತ್ರದ ಚಿತ್ರೀರಣ ತಮಿಳುನಾಡಿನಲ್ಲಿ ಜುಲೈ 7ರಂದು ಆರಂಭವಾಗಲಿದೆ. ಡಿಸೆಂಬರ್ 25ರಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ಇದ್ದು, ವರ್ಷಾಂತ್ಯದಲ್ಲಿ ಸುದೀಪ್ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಗಲಿದೆ.