ದಿಲೀಪ್ ಕುಮಾ‌ರ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ʻಯುವ ಪುರಸ್ಕಾರʼ

0
51

ನವದೆಹಲಿ: ಆರ್. ದಿಲೀಪ್ ಕುಮಾ‌ರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ʻಯುವ ಪುರಸ್ಕಾರʼ ಲಭಿಸಿದೆ.
50 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡ ʼಯುವ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ಲೇಖಕರಾದ ಟಿ.ಪಿ ಅಶೋಕ, ವಿಕ್ರಂ ವಿಸಾಜಿ ಹಾಗೂ ಜಿ.ಎಂ. ಹೆಗಡೆ ತೀರ್ಪುಗಾರರಾಗಿದ್ದರು.

Previous articleದೇಶದ ಪ್ರಥಮ EV ಸಫಾರಿ ಬಸ್‌ಗೆ ಪ್ರಾಯೋಗಿಕ ಚಾಲನೆ
Next articleಶಿವಲಿಂಗಪ್ಪ ಹಂದಿಹಾಳು ಅವರಿಗೆ ʼಬಾಲ ಸಾಹಿತ್ಯ ಪುರಸ್ಕಾರʼ