ಮಹೇಶ್ ಜೋಶಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ

0
50

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ಇತರೆ ಸೌಲಭ್ಯಗಳನ್ನು ಹಿಂಪಡೆದು ಸರಕಾರ ಆದೇಶ ಹೊರಡಿಸಿದೆ.
ಮಹೇಶ್ ಜೋಶಿ ಅವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕೆಲ ಸಾಹಿತಿಗಳು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸಾಹಿತ್ಯ ಪರಿಷತ್ತಿನ ಸ್ಥಾನದಿಂದ ಅವರನ್ನು ಇಳಿಸಬೇಕು ಎಂದು ಕೋರಿದ್ದರು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವು ಈ ಆದೇಶ ಹೊರಡಿಸಿದೆ.
ನಾಡೋಜ ಡಾ: ಮಹೇಶ್ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಇವರಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 49 ಶಿಸನೇ 2022 ದಿನಾಂಕ: 03.08.2022 ಹಾಗೂ ಸಿಆಸುಇ 01 ಶಿಸನೇ 2023 ದಿನಾಂಕ: 05.01.2023 ರಲ್ಲಿ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ತಿಳಿಸಿದೆ.

Previous articleಎಡಿಜಿಪಿಯಾಗಿ ಬಡ್ತಿ ಪಡೆದ ಡಿ.ರೂಪಾ
Next articleಅವರಿಗೆ ಸಂಸ್ಕೃತದ ವ್ಯಾಮೋಹ ವಿಪರೀತ ಇದ್ದಂತಿದೆ