SK Home Ad
Home ಅಪರಾಧ ಮೋದಿ ಅಪಮಾನಿಸಿ ಪೋಸ್ಟ್: ಯುವಕನನ್ನು ವಶಕ್ಕೆ ಪಡೆದ ಪೊಲೀಸರು

ಮೋದಿ ಅಪಮಾನಿಸಿ ಪೋಸ್ಟ್: ಯುವಕನನ್ನು ವಶಕ್ಕೆ ಪಡೆದ ಪೊಲೀಸರು

0
161

ಕಲಾದಗಿ(ಜಿ.ಬಾಗಲಕೋಟೆ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಸರಿ ಸಮವಸ್ತ್ರದಲ್ಲಿ ಕೈದಿಯಂತೆ ಅಪಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಹರಿಬಿಟ್ಟಿದ್ದ ಯುವಕನ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹಮ್ಮದ್ ಅಜಿಜ್ ಅಬ್ದುಲ್ ಸಾಬ್ ರೋಣ(೨೭) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಕೈದಿ ವೇಷದಲ್ಲಿ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ಧೀನ್ ಒವೈಸಿಯನ್ನು ಪೊಲೀಸ್ ವೇಷದಲ್ಲಿ ಬಿಂಬಿಸುವ ಫೋಟೋ ಹಾಕಿದ್ದ.

ಇದನ್ನು ಗಮನಿಸಿದ ಪೊಲೀಸರು ಆತನ ಮೇಲೆ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.