ದುಷ್ಕರ್ಮಿಗಳ ಕುಕೃತ್ಯಕ್ಕೆ ಲಕ್ಷಾoತರ ಮೌಲ್ಯದ ಫಸಲು ನಾಶ

ಕಲಾದಗಿ:ದುಷ್ಕರ್ಮಿಗಳ ಕುಕೃತ್ಯಕ್ಕೆ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾoತರ ಮೌಲ್ಯದ ಫಸಲು ಬೆಂಕಿಗೆ ಅಹುತಿಯಾದ ಘಟನೆ ಸಮೀಪದ ಚಿಕ್ಕಸಂಶಿ ವ್ಯಾಪ್ತಿಯ ತೋಟದಲ್ಲಿ ಬುಧವಾರ ಬೆಳಗಿನ ಜಾವಾ ಸಂಭವಿಸಿದೆ.

ಚಿಕ್ಕ ಸಂಶಿಯ ಬಿರಾದಾರ್ ಪಾಟೀಲ್ ಮನೆತನದ ಮಂಜು ಬಿರಾದಾರ್ ಪಾಟೀಲ್ ಮತ್ತವರ ಸಹೋದರರಿಗೆ ಸೇರಿದ ತೋಟದಲ್ಲಿ ಇದು ಸಂಭವಿಸಿದೆ. ಇದ್ರಿಂದ ಮನೆಯೊಳಗೆ ಸಂಗ್ರಹಣೆ ಮಾಡಿಟ್ಟಿದ್ದ 70 ಚೀಲ ಶೇಂಗಾ, 10 ಚೀಲ ಗೋಧಿ, 10 ಚೀಲ ಜೋಳ ಸೇರಿದಂತೆ ಇನ್ನಿತರ ವಸ್ತುಗಳು ಬೆಂಕಿಗೆ ಅಹುತಿಯಾಗಿದ್ದು ಇದರಿಂದ 8 ಲಕ್ಷಕ್ಕೂ ಅಧಿಕ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಮನೆಯ ಕಿಡಕಿ ಮೂಲಕ ಪೆಟ್ರೋಲ್ ಒಳಗೆ ಹಾಕಿ ಬೆಂಕಿ ಹಚ್ಚಿ ತಮ್ಮ ವಿರೋಧಿಗಳು ಈ ಕುಕೃತ್ಯ ಮಾಡಿದ್ದಾರೆ ಎಂದು ಸಂಬoಧಿಸಿದವರು ಆರೋಪಿಸಿದ್ದಾರೆ.