ಪ್ರತಿಯೊಂದು ಆತ್ಮವೂ ತನ್ನ ಸುತ್ತ ಐದು ಕೋಶಗಳನ್ನು ಹೊಂದಿರುತ್ತದೆ. ಮೊದಲನೆಯದು ಪರಿಸರ-ಅನ್ನರಸಮಯ ಕೋಶ. ವಾತಾವರಣವೆಲ್ಲವೂ ವಿಷಪೂರಿತ ಅನಿಲದಿಂದ ತುಂಬಿದ್ದರೆ ನಿಮ್ಮ ದೇಹ ಇರಲು ಸಾಧ್ಯವೆ? ಇಲ್ಲ! ಗಾಳಿಯಿರುವುದರಿಂದಲೇ ನಿಮ್ಮ ದೇಹವೂ ಇದೆ.
ಅನ್ನ ಎಂದರೆ ಆಹಾರ, ರಸ ಎಂದರೆ ರಸಮಯವಾಗಿರುವುದು. ಬಾಹ್ಯದ ಪರಿಸರವು ರಸಮಯವಾಗಿದೆ. ನಿಮ್ಮ ಕಣ್ಣುಗಳನ್ನು ಆಕರ್ಷಿಸುತ್ತದೆ, ಸುಗಂಧದಿಂದ ನಿಮ್ಮ ಮೂಗನ್ನು ಸೆರೆಹಿಡಿಯುತ್ತದೆ ಮತ್ತು ಶಬ್ದದಿಂದ ನಿಮ್ಮನ್ನು ಪುಳಕಗೊಳಿಸುತ್ತದೆ. ಇದೆ ಲ್ಲವೂ ರಸ. ಪರಿಸರವು ರಸಮಯವಾಗಿದೆ ಮತ್ತು ಆಹಾರದಿಂದಲೂ ತುಂಬಿದೆ. ಇವೆಲ್ಲವೂ ದೇಹದ ಆಹಾರವೂ ಹೌದು. ಉದಾಹರಣೆಗೆ ದೃಶ್ಯವು ಕಣ್ಣಿಗೆ ಆಹಾರ ಮತ್ತು ಸಂತೋಷವು ಆತ್ಮದ ಆಹಾರ.
ಎರಡನೆಯದು-ಪ್ರಾಣಮಯ ಕೋಶ. ಇದೇ ಜೀವದ ಶಕ್ತಿ ಅಥವಾ ಪ್ರಾಣ ಶಕ್ತಿ. ನಿಮ್ಮ ದೇಹಕ್ಕೆ ಬೆಲೆಯಿರುವ ಕಾರಣ ಅದರಲ್ಲಿ ಪ್ರಾಣ ಇರುವುದರಿಂದ, ನೀವು ಉಸಿರಾಡುತ್ತಿರುವುದರಿಂದ. ಮೂರನೆಯದು ಮನೋ ಮಯ ಕೋಶ-ಎಂದರೆ ಮನಸ್ಸು, ಆಲೋಚನೆಗಳು ಮತ್ತು ಭಾವನೆಗಳು. ನಾಲ್ಕನೆ ಯದು ವಿಜ್ಞಾನಮಯ ಕೋಶ. ಇದು ಮನಸ್ಸಿಗಿಂತಲೂ ಸೂಕ್ಷ್ಮವಾದದ್ದು. ಅದು ಅಂತಃಸ್ಫುರಿತ ಭಾವನೆಗಳ ಕ್ಷೇತ್ರ. ಅದು ಆಲೋಚನೆಗಳಿಗಿಂತಲೂ, ವಿಚಾರಕ್ಕಿಂತಲೂ ಅತೀತವಾದದ್ದು. ನಿಮ್ಮೊಳಗಿರುವ ಒಂದು ದೇಹದಿಂದ ಎಲ್ಲ ಸೃಷ್ಟಿಶೀಲತೆ ಮತ್ತು ನಾವೀನ್ಯತೆ ಹೊರಬರುತ್ತದೆ. ವಿಜ್ಞಾನಮಯ ಕೋಶದಿಂದಲೇ ಪ್ರತಿಯೊಂದು ಆವಿಷ್ಕಾರ, ಹೊಸ ಸೃಷ್ಟಿ, ಹೊಸ ಕಲೆ, ಕವಿತೆ ಹೊರಬರುವುದು, ಮನೋಮಯ ಕೋಶದಿಂದಲ್ಲ.
ಐದನೆಯದು ಆನಂದಮಯ ಕೋಶ. ಇದು ನಿಮ್ಮ ದೇಹಕ್ಕಿಂತಲೂ ದೊಡ್ಡದಾಗಿದೆ. ಆದ್ದರಿಂದಲೇ ನೀವು ಸಂತೋಷದಿಂದಿದ್ದಾಗ ನಿಮಗೆ ವಿಸ್ತಾರವಾದಂತಹ ಭಾವನೆ ಉಂಟಾಗುವುದು. ದುಃಖದಿಂದಿದ್ದಾಗ ನೀವು ಜಜ್ಜಿಹೋದಂತೆ ನಿಮಗನಿಸುತ್ತದೆ. ಈ ಐದು ಕೋಶಗಳನ್ನು ನಾವೆಲ್ಲರೂ ಅನುಭವಿಸಬಹುದು.