ಚಿಕನ್‌ ರೋಲ್‌ ಕೊಡದಿದ್ದಕ್ಕೆ ಮನೆಗೆ ಬೆಂಕಿ

0
16

ಬೆಂಗಳೂರು: ಚಿಕನ್ ರೋಲ್ ಕೊಡದಿದ್ದಕ್ಕೆ ಕೋಪಗೊಂಡು ಹೊಟೇಲ್ ಮಾಲಿಕನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ಮತ್ತೊಬ್ಬನಿಗಾಗಿ ಶೋಧ ನಡೆಸುತ್ತಿದ್ದಾರೆ. ಮೂವರು ಯುವಕರು ಹೊಟೇಲ್‍ಗೆ ಹೋಗಿ ಚಿಕನ್ ರೋಲ್ ಕೇಳಿದ್ದಾರೆ. ಮಾಲಿಕರು ಈಗಾಗಲೇ ಸಮಯವಾಗಿದ್ದು, ಚಿಕನ್ ರೋಲ್ ಖಾಲಿಯಾಗಿದೆ. ಹೊಟೇಲ್ ಬಾಗಿಲು ಮುಚ್ಚುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದರಿಂದ ಕೋಪಗೊಂಡ ಯುವಕರು ಹೊಟೇಲ್ ಸಮೀಪದಲ್ಲೇ ಇದ್ದ ಮಾಲಿಕನ ಮನೆ ಬಳಿ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದಾಗಿ ಮನೆ ಕಿಟಕಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಈ ಬಗ್ಗೆ ಹನುಮಂತನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡದಿದ್ದರೆ ಬೃಹತ್ ಜನಾಂದೋಲನ
Next articleಮುರುಘಾ ಮಠಕ್ಕೆ ವಸ್ತ್ರದ ನೂತನ ಆಡಳಿತಾಧಿಕಾರಿ