ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸಂಗ್ರಹಿಸಿ ಮಹಿಳೆಯೊಬ್ಬಳು ಹಸುವನ್ನು ಖರೀದಿಸಿ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾಳೆ.
ಶಿಗ್ಗಾವಿ ತಾಲೂಕಿನ ಕುಂದೂರ ಗ್ರಾಮದ ವಿಶಾಲಾಕ್ಷೀ ಶೇಖರಗೌಡ ಹೊಸಮನಿ ಗೃಹಲಕ್ಷ್ಮೀ ಯೋಜನೆಯ 18 ಕಂತುಗಳ ಹಣ ಕೂಡಿಟ್ಟು ಹಸು ಖರೀದಿಸಿ, ಹೈನುಗಾರಿಕೆ ಮಾಡುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಯೋಜನೆಯ 36 ಸಾವಿರ ರೂ., ಸಂಗ್ರಹಿಸಿ ಹಸು ಖರೀದಿಸಿದ ವಿಶಾಲಾಕ್ಷೀ ಅವರು, ರಾಜ್ಯ ಸರ್ಕಾರದ ಈ ಯೋಜನೆ ನಮ್ಮ ಕುಟುಂಬಕ್ಕೆ ಊಟ ನೀಡುತ್ತಿದೆ. ನಮ್ಮ ಕುಟುಂಬದ ನಿರ್ವಹಣೆ ಈ ಹಸುವಿನಿಂದಲ್ಲೇ ಆಗುತ್ತಿದೆ ಎಂದು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆ ಮಹಿಳೆಯರಿಗೆ ಅನೂಕೂಲವಾಗಿದ್ದು, ಸಿಎಂ ಸಿದ್ದರಾಮಯ್ಯ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಧನ್ಯವಾದನ್ನು ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.