ಪಂಚಮಸಾಲಿ ಪೀಠ ಪಕ್ಷಾತೀತವಾಗಿದೆ

0
28

ಇಳಕಲ್ : ಕೂಡಲಸಂಗಮ ಪಂಚಮಸಾಲಿ ಪೀಠ ಪಕ್ಷಾತೀತ ಪೀಠವಾಗಿದೆ ಅದಕ್ಕೆ ಎಲ್ಲರೂ ಸರಿಸಮಾನರು ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು
ಭಾನುವಾರದಂದು ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಬಾರುಕೋಲು ಎಲ್ಲಿ ಎಂದು ಮಾಜಿ ಸಚಿವ ಬಿಜೆಪಿಯ ಸಿ ಸಿ ಪಾಟೀಲ ಕೇಳಿದ್ದಾರೆ ಅದು ನನ್ನ ಬಳಿಯೇ ಇದೆ ಅವರಿಗೆ ಬೇಕೆಂದರೇ ನಾನು ಅದನ್ನು ತೋರಿಸುತ್ತೇನೆ ಎಂದು ಛೇಡಿಸಿದರು
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಮಾಡಲು ಆಗದ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತು ಆದರೆ ಒಂದು ಕೋಮಿನ ಜನರಿಗೆ ಮಾಡಿದ ಅನ್ಯಾಯ ಬಿಜೆಪಿಗೆ ಚುನಾವಣೆಯಲ್ಲಿ ತಿರುಗೇಟು ನೀಡಿತು ಹಿಂದುಳಿದ ಆಯೋಗದ ವರದಿ ಮಧ್ಯಂತರವಾಗಿ ನೀಡಿದ್ದರಿಂದ ಮತ್ತು ಮೀಸಲಾತಿ ವಿಷಯ ನ್ಯಾಯಾಲಯದ ಕಟ್ಟೆ ಹತ್ತಿದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಕಾದು ನೋಡುತ್ತಿದ್ದಾರೆ ನ್ಯಾಯಾಲಯ ತೀರ್ಪಿನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ವಿವರಿಸಿದರು
ಬಸವರಾಜ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದರೂ ಅವರು ಸ್ವಯಂ ಘೋಷಿತ ಮುಖ್ಯಮಂತ್ರಿ ಹಾಗೆ ಹೇಳಿಕೆ ನೀಡುತ್ತಿದ್ದಾರೆ ಅವರು ಮತ್ತು ಸಿ ಸಿ ಪಾಟೀಲ ಸೇರಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳನ್ನು ಚುನಾವಣೆಗೆ ನಿಲ್ಲಿಸುವ ಹವಣಿಕೆಯಲ್ಲಿ ಇದ್ದಾರೆ ಸ್ವಾಮಿಗಳಿಗೆ ಪಂಚಮಸಾಲಿ ಸಮಾಜದ ವತಿಯಿಂದ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಎ ೨೨ ರವರೆಗೆ ಸಮಯಾವಕಾಶ ನೀಡಿದೆ ಅಷ್ಟರಲ್ಲಿ ಅವರು ಪೀಠಕ್ಕೆ ಬದ್ದರಾಗಿರಬೇಕು ಇಲ್ಲದಿದ್ದರೆ ಸಮಾಜ ತೆಗೆದುಕೊಳ್ಳುವ ನಿರ್ಣಯಕ್ಕೆ ತಲೆ ಬಾಗಲೇ ಬೇಕಾಗುತ್ತದೆ ಎಂದು ಅವರು ಸ್ಪಷ್ಟ ಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿ ಜಿ ಪಾಟೀಲ, ಮಹಾಂತೇಶ ಆವಾರಿ , ಗಂಗಣ್ಣ ಬಾಗೇವಾಡಿ,ಮುತ್ತಣ್ಷ ಕಲ್ಗುಡಿ ಮತ್ತಿತರರು ಉಪಸ್ಥಿತರಿದ್ದರು

Previous articleಕತ್ತು ಹಿಚುಕಿ ಬಾಲಕಿ ಕೊಲೆ
Next articleರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವೇ ಇಲ್ಲ, ಈಗ ಮಾಡಿರುವುದೂ ವೈಜ್ಞಾನಿಕವಾಗಿಲ್ಲ: ಕೇಂದ್ರ ಸಚಿವ ಜೋಶಿ