ಕುಖ್ಯಾತ ದರೋಡೆಕೋರ ತಪ್ಪಿಸಿಕೊಳ್ಳಲು ಯತ್ನ: ಮುಂಡರಗಿ ಸಿಪಿಐ ಮಂಜುನಾಥ್ ಫೈರಿಂಗ್..!

ಗದಗ: ರಾಜ್ಯದ ವಿವಿಧೆಡೆ ಹೈಟೆಕ್ ತಂತ್ರಜ್ಞಾನದ ಮೂಲಕ ದರೋಡೆ ನಡೆಸುತ್ತಿದ್ದ ಗ್ಯಾಂಗ್‌ನ ಸದಸ್ಯರನ್ನು ತನಿಖೆಗೆ ಪೊಲೀಸ್ ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಓರ್ವನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ನಡುವೆ ನಿನ್ನೆ ದಿ.೩೦ರಂದು ರಾತ್ರಿ ನಡೆದಿದೆ.
ಈ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ದರೋಡೆಕೋರ ಜಯಸಿಂಹ ಮೋಡಕೇರನನ್ನು ಚಿಕಿತ್ಸೆಗಾಗಿ ಜಿಮ್ಸಗೆ ದಾಖಲಿಸಲಾಗಿದೆ. ದರೋಡೆಕೋರ ಜಯಸಿಂಹ ಮೊಡಕೆರ್ ಕಾಲಿಗೆ ಎರಡು ಸುತ್ತು ಗುಂಡೇಟು ತಗಲಿದೆ. ರಾಜ್ಯ ,ಅಂತರರಾಜ್ಯ ಪೊಲೀಸರಿಗೆ ತಲೆನೋವಾಗಿದ್ದ ದರೋಡೆಕೋರರ ಗ್ಯಾಂಗ್ ಪತ್ತೆಗೆ ಎಸ್ಪಿ ಬಾಬಾಸೇಹಬ ನೇಮಗೌಡ ಎಎಸ್ಪಿ ಎಸ್.ಬಿ.ಸಂಕದ, ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್, ಮುಳಗುಂದ ಸಿಪಿಐ ಸಂಗಮೇಶ್ ಶಿವಯೋಗಿ, ಬೆಟಗೇರಿ ಸಿಪಿಐ ಧೀರಜ್ ಶಿಂಧೆ ನೇತ್ರತ್ವದ ತಂಡವನ್ನ ರಚಿಸಿದ್ದರು. ದರೋಡೆಕೋರರನ್ನು ನಿನ್ನೆ ವಿಜಯನಗರ ಜಿಲ್ಲೆ ಬಳಿ ಪೊಲೀಸರು ಜಯಸಿಂಹನನ್ನ ವಶಕ್ಕೆ ಪಡೆದು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ.
ದರೋಡೆಕೋರರು ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾಗ್ರಾಂ ಮೂಲಕ ಸಂವಹನ ನಡೆಸುತ್ತಿತ್ತು. ಇವರನ್ನ ಕಂಡು ಹಿಡಿಯುವದು ಖಾಕಿಗೆ ಸವಾಲಾಗಿತ್ತು. ಗ್ಯಾಂಗ್‌ನ ಮೇಲೆ ನಿಗಾ ಇರಿಸಿಕೊಂಡಿದ್ದ ಜಿಲ್ಲೆಯ ಖಾಕಿಗೆ ಕೊನೆಗೂ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ಮಧ್ಯೆ ಪೊಲೀಸ್ ವಾಹನದಲಿದ್ದ ಪೊಲೀಸ್ ಸಿಬ್ಬಂದಿ ವಿರೇಶ ಬಿಸನಳ್ಳಿ ಎಂಬುವವರ ಮೇಲೆ ಆರೋಪಿ ಜಯಸಿಂಹ ಮೊಡಕೇರ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಪ್ರಯತ್ನಿಸಿದ್ದಾನೆ. ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆರೋಪಿ ಪರಾರಿಯಾಗಲು ಪ್ರಯತ್ನಿಸಿದಾಗ ಆರೋಪಿ ಎಡಗಾಲಿಗೆ ಎರೆಡು ಸುತ್ತು ಫೈರಿಂಗ್ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಗದಗ ಎಸ್ಪಿ ಬಿ.ಎಸ್. ನೇಮಗೌಡ ಗಾಯಾಳು ಆರೋಪಿ, ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿಯ ಆರೋಗ್ಯ ವಿಚಾರಿಸಿದರು. ಅವರು ಘಟನೆಯ ಕುರಿತು ಪೊಲೀಸರಿಂದ ವಿವರಗಳನ್ನ ಪಡೆದುಕೊಂಡರು. ಅಲ್ಲದೇ ಫೈರಿಂಗ್ ನಡೆದ ಸ್ಥಳಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ,ಜಾಲಹಳ್ಳಿಯಜನತಾ ಪ್ಲಾಟ ನಿವಾಸಿಯಾಗಿರುವ ಜಯಸಿಂಹ ಮತ್ತು ಅವನ ಗ್ಯಾಂಗ್ ರಾಜ್ಯದ ಹಲವಾರು ಕಡೆಗಳಲ್ಲಿ ದರೋಡೆ, ಮನೆ ಕಳ್ಳತನ, ಮತ್ತು ಇತರ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.

ಈಲ್ಲೆಯ ವಿವಿಧೆಡೆ ಸೇರಿದಂತೆ ರಾಜ್ಯದಲ್ಲಿ ಅನೇಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್, ಜಯಸಿಂಹ ಮೊಡಕೆರ್ ಅವರನ್ನು ಪೊಲೀಸರು ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದರಿಂದ ಸಿಪಿಐ ಮಂಜುನಾಥ ಕುಸುಗಲ್ ಗುಂಡು ಹಾರಿಸಿದ್ದಾರೆ.ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ.
:ಬಾಬಾಸಾಹೇಬ ನೇಮಗೌಡ ಎಸ್ಪಿ.