ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಬಹುನಿರೀಕ್ಷಿತ ಮಲ್ಟಿ ಸ್ಟಾರ್ ’45’ ಸಿನಿಮಾ ಟೀಸರ್ ಮಾರ್ಚ್ 30ರಂದು ಯುಗಾದಿ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿದೆ.
ಈ ಕುರಿತಂತೆ ಆನಂದ ಆಡಿಯೋ ತನ್ನ ಯೂಟ್ಯೂಬ್ ಚಾನಲನಲ್ಲಿ ಟೀಸರ್ ತಯಾರಿ ಕುರಿತಂತೆ ವಿಡಿಯೋ ಬಿಟ್ಟಿದ್ದು, ನಿರ್ದೇಶಕ ಅರ್ಜುನ್ ಜನ್ಯ, ’45 ಎಂದರೇನು? ಎಂದು ಅನೇಕರು ಕೇಳುತ್ತಿದ್ದರು. ಆ ಪ್ರಶ್ನೆಗೆ ಈ ಟೀಸರ್‌ನಲ್ಲಿ ಉತ್ತರ ಸಿಗಲಿದೆ’ ಎಂದಿದ್ದಾರೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರಲ್ಲೂ ಚರ್ಚೆ ಶುರುವಾಗುತ್ತದೆ ಎಂದಿರುವ ಅರ್ಜುನ್ ಜನ್ಯ ಅವರು, ‘ಇದು ಹೊಸ ರೀತಿಯ ಟೀಸರ್ ಆಗಿರುವುದರಿಂದ ಖಂಡಿತವಾಗಿಯೂ ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತದೆ ಎಂದರು. ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ 45 ಆಗಸ್ಟ್ 15 ರಂದು ನಿಮ್ಮೆಲ್ಲರ ಮುಂದೆ ಬರಲಿದೆ.
ನಟ ಶಿವರಾಜಕುಮಾರ್, ರಾಜ್ ಬಿ, ಉಪೇಂದ್ರ ಯಾವ ರೀತಿಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅವರ ಪಾತ್ರಗಳ ಝಲಕ್ ಎಲ್ಲವೂ ಈ ಟೀಸರ್‌ನಲ್ಲಿವೆ. ಮಾಸ್ ಆಡಿಯನ್ಸ್‌ಗೆ ಇಷ್ಟವಾಗುವ ಸಾಕಷ್ಟು ಸರ್‌ಪ್ರೈಸಿಂಗ್ ವಿಷಯಗಳು ಕೂಡ ಈ ಟೀಸರ್‌ನಲ್ಲಿವೆ’ ಎಂದು ಹೇಳಿದ್ದಾರೆ.