ರಾಯರ ಮಠದ ಮುಂಭಾಗ ಪೊಲೀಸ್ ಬಂದೋಬಸ್ತ್

ಕೊಪ್ಪಳ: ನಗರದ ರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದಲ್ಲಿ ಗುರುವಾರ ಪೊಲೀಸ್ ಬಂದೋಬಸ್ತ್ ಅಳವಡಿಸಲಾಗಿದೆ.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಕೊಪ್ಪಳದ ರಾಯರ ಮಠದ ರಾಘವೇಂದ್ರ ಸ್ವಾಮಿಗಳಿಗೆ ಮಂಗಳಾರತಿ ಸಲ್ಲಿಸಿ, ತೆರಳುತ್ತಾರೆ ಎಂಬ ಮಾಹಿತಿ ಇದ್ದು, ಹೀಗಾಗಿ ರಾಘವೇಂದ್ರ ಮಠದ ರಸ್ತೆಗೆ ಪೊಲೀಸರು ಬ್ಯಾರಿಕೇಡಗಳನ್ನು ಅಳವಡಿಸಿದ್ದಾರೆ.

ನೂರಾರು ಜನ ಬ್ರಾಹ್ಮಣ ಸಮಾಜದವರು ರಾಘವೇಂದ್ರ ಮಠದಲ್ಲಿ ಶ್ರೀಗಳಿಗಾಗಿ ಕಾಯುತ್ತಿದ್ದಾರೆ. ದೈನಂದಿನಂತೆ ಪೂಜಾ ಕಾರ್ಯಗಳು, ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಗುತ್ತಿದೆ.

ನಗರ ಪೊಲೀಸ್ ಠಾಣೆಯ ಪಿಐ ಜಯಪ್ರಕಾಶ ಸೇರಿ ಇತರರು ಇದ್ದರು.