ಟಾಸ್‌ ಗೆದ್ದು RCBಗೆ ಬ್ಯಾಟ್‌ ನೀಡಿದ ಮುಂಬೈ ಇಂಡಿಯನ್ಸ್

0
18

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಇದೆ.
ಮುಂಬೈ ಇಂಡಿಯನ್ಸ್‌ ತಂಡ ಟಾಸ್‌ ಗೆದ್ದು ಬೌಲಿಂಗ್‌ ಆಯ್ದು ಕೊಂಡಿದೆ, ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದ ಆರ್‌ಸಿಬಿ ತಂಡ 4 ಪಾಂಯಿಂಟ್ಸ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ ತಂಡ ಇಂದು ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಆಡಲಿದ್ದು, ಟೂರ್ನಿಯಲ್ಲಿ ಇದೇ ಮೊದಲ ಸಲ, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಸ್ಮೃತಿ ಮಂದಾನ ಪಡೆಗೆ, ಮುಂಬೈಗೆ ಉತ್ತಮ ಗುರಿ ನೀಡುವ ಸವಾಲು ಇದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ನ 7ನೇ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಮತ್ತೊಂದೆಡೆ ತವರಿನಲ್ಲಿ ಸತತ ಮೂರನೇ ಗೆಲುವು ದಾಖಲಿಸಲು ಸ್ಮೃತಿ ಮಂದಾನಾ ಭರ್ಜರಿ ತಯಾರಿ ನಡೆಸಿದೆ. ಮತ್ತೊಂದೆಡೆ ಆರ್‌ಸಿಬಿಗೆ ಟಕ್ಕರ್ ಕೊಡುವುದಕ್ಕೆ ಹರ್ಮನ್ ಪ್ರೀತ್ ಕೌರ್ ಪಡೆ ಕೂಡ ಸಿದ್ಧತೆ ನಡೆಸಿದೆ. 7.30ಕ್ಕೆ ಪಂದ್ಯ ಆರಂಭ ಆಗಲಿದೆ.

Previous articleಕನ್ನಡ ನೆಲದಲ್ಲಿಯೇ ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡೆಕ್ಟರ್‌ಗೆ ಥಳಿತ
Next articleತೆಂಗಿನ ಕಡ್ಡಿ ಎದೆ ಭಾಗಕ್ಕೆ ಹೊಕ್ಕು ಗಂಭೀರ ಸ್ಥಿತಿಯಲ್ಲಿದ್ದ ಬಾಲಕ ಗುಣಮುಖ