ಕಾಟಾಚಾರಕ್ಕೆ ನಡೆಯುತ್ತಿರುವ ಬಜೆಟ್ ಪೂರ್ವಭಾವಿ ಸಭೆ

0
36

ನಾಲ್ಕೈದು ವರ್ಷಗಳಿಂದ ಸಾರ್ವಜನಿಕರ ಸಮಸ್ಯೆಗಳಿಗಿಲ್ಲ ಪರಿಹಾರ

ನಾಲ್ಕೈದು ವರ್ಷಗಳಿಂದ ಸ್ಥಳೀಯ ನಗರಸಭೆಯಲ್ಲಿ ಬಜೆಟ್ ಪೂರ್ವಭಾವಿ ಸಭೆಯನ್ನಾಗಿ ಸಾರ್ವಜನಿಕರ ಆಹ್ವಾಲು ಸ್ವೀಕರಿಸುತ್ತಿರುವ ಅಧಿಕಾರಿಗಳಿಂದ ಪೂರಕ ಪ್ರತಿಕ್ರಿಯೆ ದೊರಕದೆ ಕೇವಲ ಕಾಟಾಚಾರಕ್ಕೆಂಬುದು ಪ್ರಸಕ್ತ ವರ್ಷವೂ ಕಾರಣವಾಗಿದೆ.ಪ್ರತಿ ವರ್ಷ ನಗರಸಭೆ ಬಜೆಟ್‌ನ ಮೊದಲು ಸಾರ್ವಜನಿಕರ ಸಭೆ ನಡೆಸಲಾಗುತ್ತದೆ. ಬಹುದಿನಗಳ ಆಸೆಯಾಗಿರುವ ಪಟ್ಟಣದಲ್ಲಿನ ದ್ವಿಪಥ ರಸ್ತೆ, ರಸ್ತೆ ಅಗಲೀಕರಣ, ಬಸ್ ಶೆಲ್ಟರ್, ಹೈಟೆಕ್ ಶೌಚಾಲಯ, ನಿರಂತರ ನೀರು ಪೂರೈಕೆ, ಕಸ ವಿಲೇವಾರಿಗೆ ಉತ್ತೇಜನ ಸೇರಿದಂತೆ ಹಲವಾರು ಆಗ್ರಹಗಳನ್ನು ಸ್ವೀಕರಿಸಿದ ನಂತರ ಯಾವದೇ ವಿಷಯಗಳು ಕಾರ್ಯಗತಿಗೆ ಬಾರದ ಕಾರಣ ಜನತೆ ತೀವ್ರ ನಿರಾಸೆಗೆ ಕಾರಣವಾಗಿದೆ.

ಸದಸ್ಯರ ಇಚ್ಛಾಶಕ್ತಿ ಕೊರತೆ: 31 ಸದಸ್ಯರನ್ನು ಒಳಗೊಂಡಿರುವ ನಗರಸಭೆಯಲ್ಲಿ ಸಾರ್ವಜನಿಕರ ಆಹ್ವಾಲುಗಳಿಗೆ ಇಲ್ಲಿನ ಸದಸ್ಯರು ಧ್ವನಿಗೂಡಿಸದಿರುವದೇ ಪ್ರಮುಖ ಕಾರಣವಾಗಿದೆ.

ಸರ್ಕಾರದಿಂದ ಬಂದ ಅನುದಾನಗಳನ್ನು ವಾರ್ಡ್ ವಿಭಾಗಗಳಲ್ಲಿ ಹಂಚಿಕೆ ಮಾಡುವ ವ್ಯವಸ್ಥೆಯಿದೆ.

ಇದರಲ್ಲಿ ನಗರ ಅಭಿವೃದ್ಧಿಗೆ ಸದಸ್ಯರ ಒಗ್ಗೂಡುವಿಕೆ ಕೊರತೆಯಾದರೆ, ಸರ್ವತೋಮುಖ ಬೆಳವಣಿಗೆಯ ಅಭಾವ ಸದಸ್ಯರಿಂದ ಪ್ರತಿಕ್ರಿಯೆ ದೊರಕದಿರುವದೇ ಕಾರಣ. ಇವೆಲ್ಲವುಗಳಿಂದ ಬೇಸತ್ತಿರುವ ಜನರು, ಪೂರ್ವಭಾವಿ ಸಭೆಯನ್ನೇ ಕರೆಯದೆ ಬಜೆಟ್ ಕಾರ್ಯ ನಿರ್ಮಿಸಿಕೊಳ್ಳಲಿ ಎಂದು ಬೇಸರ ವ್ಯಕ್ತಪಡಿಸಿದ್ದು, ಮುಂದಿನ ಬಜೆಟ್ ಪೂರ್ವಭಾವಿ ಸಭೆಗೆ ಒಕ್ಕೊರಲಿನಿಂದ ಗೈರಾಗುವಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ.

`ಕಳೆದ ನಾಲ್ಕೈದು ವರ್ಷಗಳಿಂದ ಕಟ್ಟಕಡೆಯ ಪ್ರಜೆಗಳ ಧ್ವನಿಯಾಗಿ ಅಭಿವೃದ್ಧಿ ವಿಷಯಗಳ ಕುರಿತು ಪ್ರಸ್ತಾಪ ಮಾಡಿದಾಗ್ಯೂ ಒಂದೇ ಒಂದು ಕೆಲಸ ನಿರ್ವಹಣೆಯಾಗಿಲ್ಲ’.–ಶಂಕರ ಜಾಲಿಗಿಡದ, ನೇಕಾರ ಮುಖಂಡರು.

`ಈ ಹಿಂದೆ ರಬಕವಿಗೆ ಸಂಬಂಧಿಸಿದ ಹಲವಾರು ಕಾರ್ಯಗಳ ಬಗ್ಗೆ, ಮೂಲಭೂತ ಕೊರತೆಗಳ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಬೆಳಕು ಚೆಲ್ಲಿದರೂ ಪ್ರಯೋಜನವಾಗಿಲ್ಲ’.—ಡಾ. ರವಿ ಜಮಖಂಡಿ,

`ಸಾರ್ವಜನಿಕರಿಂದ ಕಾಮಗಾರಿಗಳ ಬಗ್ಗೆ ಮಾಹಿತಿಯಿದೆ. ಪೂರ್ವಭಾವಿ ಬಜೆಟ್‌ನಲ್ಲಿ ಜನರ ವಿಶ್ವಾಸದೊಂದಿಗೆ ಸರ್ವ ಸದಸ್ಯರ ಸಹಮತ ಅಗತ್ಯವಿದೆ. ಇದರಿಂದ ನಗರ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಸದಸ್ಯರ ವಿಶ್ವಾಸದೊಂದಿಗೆ ಬಸ್ ಶೆಲ್ಟರ್ ಸೇರಿದಂತೆ ಹಲವು ಕಾರ್ಯಗಳ ನಿಯೋಜನೆಯಲ್ಲಿದ್ದೇವೆ.’
ಜಗದೀಶ ಈಟಿ, ಪೌರಾಯುಕ್ತ.

Previous articleಕಬಡ್ಡಿಯಲ್ಲಿ ಜಾರಿದ ಉಪ ಸಭಾಪತಿ ರುದ್ರಪ್ಪ ಲಮಾಣಿ
Next articleಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಶಾಸಕ, ರೈತರಿಂದ ಬೃಹತ್ ಪ್ರಮಾಣದ ಬೆಂಬಲ