ಎರಡು ಕನಸಿನ ಪುಷ್ಪಲತಾ ಇನ್ನಿಲ್ಲ

ಚೆನ್ನೈ: ಹಿರಿಯ ನಟಿ ಪುಷ್ಪಲತಾ (87) ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆ ಇದ್ದರೂ ಅವರು ಆರೋಗ್ಯವಾಗಿದ್ದರು. ಆದರೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕನ್ನಡ ಸಿನಿಮಾ ರಂಗದ ಹಿರಿಯ ನಟ & ನಟಿಯರು ಸೇರಿದಂತೆ ಭಾರತೀಯ ಸಿನಿಮಾ ಲೋಕ ಕಂಬನಿ ಮಿಡಿದಿದೆ. ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಇವರು ಮಿಂಚಿದ್ದರು. ತಮಿಳು ನಟ ಎವಿಎಂ ರಾಜನ್ ಅವರ ಪತ್ನಿ ಕೂಡ ಆಗಿದ್ದ ಹಿರಿಯ ನಟಿ ಪುಷ್ಪಲತಾ, ಕನ್ನಡ, ತೆಲುಗು, ತಮಿಳು & ಹಿಂದಿ ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದರು. ಅಲ್ಲದೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.