ಟಾಟಾ ಸ್ಟೀಲ್ ಮಾಸ್ಟರ್ಸ್:​ ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ

ನೆದರ್‌ಲ್ಯಾಂಡ್‌: ಆರ್. ಪ್ರಜ್ಞಾನಂದ 2025ರ ಟಾಟಾ ಸ್ಟೀಲ್ ಮಾಸ್ಟರ್ಸ್ ಅನ್ನು ಗೆದ್ದಿದ್ದಾರೆ.
ನೆದರ್‌ಲ್ಯಾಂಡ್‌ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿ ಫೈನಲ್‌ನಲ್ಲಿ ಡಿ. ಗುಕೇಶ್​ಗೆ ಸೋಲುಣಿಸಿ ಆರ್ ಪ್ರಜ್ಞಾನಂದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಅಂತಿಮ ಸುತ್ತಿನಲ್ಲಿ ಭಾರತೀಯ ಚೆಸ್ ಚತುರರಾದ ಪ್ರಜ್ಞಾನಂದ ಹಾಗೂ ವಿಶ್ವ ಚಾಂಪಿಯನ್ ಡಿ ಗುಕೇಶ್ ಮುಖಾಮುಖಿಯಾಗಿದ್ದರು. ಇದಾಗ್ಯೂ ಈ ಟೂರ್ನಿಯಲ್ಲಿ ಅತ್ಯಧಿಕ ರೇಟಿಂಗ್ ಪಡೆದಿರುವುದು ಡಿ. ಗುಕೇಶ್ ಎಂಬುದು ವಿಶೇಷ. ಗುಕೇಶ್ 2777 ರೇಟಿಂಗ್ ಹೊಂದಿದ್ದರೆ, ಆರ್​. ಪ್ರಜ್ಞಾನಂದ 2741 ರೇಟಿಂಗ್ ಪಡೆದುಕೊಂಡಿದ್ದಾರೆ.