ಗಾಯಕ ಸೋನು ನಿಗಮ್ ಆಸ್ಪತ್ರೆಗೆ ದಾಖಲು

ಗಾಯಕ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ನಡುವೆಯೇ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಈ ಕುರಿತಂತೆ ಸೋನು ನಿಗಮ್ ವಿಡಿಯೋ ಸಂದೇಶ ನೀಡಿದ್ದು
ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿ ಪೋಸ್ಟ್ ಮಾಡಿದ್ದಾರೆ, ನಾನು ನನ್ನ ಸಂಗೀತ ಕಾರ್ಯಕ್ರಮದ ವೇಳೆ ವೇದಿಕೆ ತುಂಬಾ ಓಡಾಡಿ ಸಂಗೀತ ಹಾಡುತ್ತೇನೆ ಅದೇ ರೀತಿ ಭಾನುವಾರ ನಡೆದ ಕಾರ್ಯಕ್ರಮದಲ್ಲೂ ವೇದಿಕೆ ತುಂಬೆಲ್ಲಾ ಓಡಾಡಿ ಸಂಗೀತ ಹಾಡುತ್ತಿದ್ದೆ ಆಗ ಒಮ್ಮೆಲೇ ಬೆನ್ನು ನೋವು ಕಾಣಿಸಿಕೊಂಡಿತು ಆದರೆ ಅದನ್ನು ಗಂಭೀರವಾಗಿ ಪರಿಗಣಿಸದೆ ಕಾರ್ಯಕ್ರಮ ಮುಂದುವರೆಸಿದೆ ಆದರೆ ಬೆನ್ನು ನೋವು ಹೆಚ್ಚಾಗತೊಡಗಿತು ಅಲ್ಲದೆ ಯಾರೋ ಬೆನ್ನಿಗೆ ಇಂಜೆಕ್ಷನ್ ಚುಚ್ಚಿದ ರೀತಿ ಭಾಸವಾಯಿತು ಇದಾದ ಬಳಿಕ ವೆಲ್ಪ ನಡೆದಾಡಿದರೂ ವಿಪರೀತ ನೋವು ಕಾಡಲು ಶುರುವಾಯಿತು ಎಂದು ಹೇಳಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ‘ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು’ ಎಂದಿದ್ದಾರೆ.