ಸಾಲಕ್ಕೆ ಹೆದರಿ ರೈತ ನೇಣಿಗೆ ಶರಣು

0
12
ರೈತ ನೇಣಿಗೆ ಶರಣು

ಇಳಕಲ್: ರಾಷ್ಟ್ರೀಕೃತ ಬ್ಯಾಂಕ್ ಮತ್ತು ಪಿಕೆಪಿಎಸ್ ದಲ್ಲಿ ಸಾಲ ಮಾಡಿದ್ದ ರೈತನೊಬ್ಬ ಅದಕ್ಕೆ ಹೆದರಿ ನೇಣು ಹಾಕಿಕೊಂಡ ಘಟನೆ ತಾಲೂಕಿನ ಕರಡಿ ಗ್ರಾಮದಲ್ಲಿ ನಡೆದಿದೆ. 50 ವರ್ಷದ ನಾಗನಗೌಡ ಬಸವಂತಗೌಡ ಮರಿಗೌಡರ ಎಂಬ ರೈತ ಕೆನರಾ ಬ್ಯಾಂಕಿನಲ್ಲಿ 60ಸಾವಿರ ಮತ್ತು ಪಿಕೆಪಿಎಸ್ ದಲ್ಲಿ 50 ಸಾವಿರ ಸಾಲ ಮಾಡಿದ್ದು ಅದನ್ನು ತೀರಿಸಲು ಸಾಧ್ಯವಾಗದೇ ನೇಣಿಗೆ ಶರಣಾಗಿದ್ದಾನೆ ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಗ್ರಾಮೀಣ ಠಾಣೆಯ ಪಿಎಸ್ ಐ ಎಸ್ ಬಿ ಪಾಟೀಲ ತನಿಖೆ ನಡೆಸಿದ್ದಾರೆ.

Previous articleಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರಕಾರ ಬದ್ಧ: ಸಿಎಂ
Next articleಚೋರ್ಲಾ ಘಾಟ್‌ನಲ್ಲಿ ಅಪಘಾತ: ಇಬ್ಬರ ಸಾವು