ವಿಲ್ಸನ್ ಗಾರ್ಡನ್ ನಾಗ ಯಾರೆಂದು ಗೊತ್ತಿಲ್ಲ

0
10
somanna

ಬೆಂಗಳೂರು: ವಿಲ್ಸನ್ ಗಾರ್ಡನ್ ನಾಗ ಯಾರೆಂದು ನಮಗೆ ಗೊತ್ತೇ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಬುಧವಾರ ರಾತ್ರಿ ಸಚಿವ ಸೋಮಣ್ಣರನ್ನು ಭೇಟಿ ಮಾಡಿದ್ದ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ವಿಲ್ಸನ್ ಗಾರ್ಡನ್ ನಾಗ ಯಾರು ಅಂತ ಗೊತ್ತೇ ಇಲ್ಲ. ನಾನು ನಾಗನನ್ನು ಭೇಟಿಯಾಗಿಲ್ಲ. ಒಂದೇ ಒಂದೂ ನಿಮಿಷವೂ ನಾನು ಅವನನ್ನು ನೋಡಿಲ್ಲ. ನಿತ್ಯ ಸಾವಿರಾರು ಜನರು ನನ್ನ ಭೇಟಿಗೆ ಬರುತ್ತಾರೆ. ನಾಗ ಯಾರು, ತಿಮ್ಮ ಯಾರು ಬೊಮ್ಮಾ ಯಾರು ನನಗೆ ಗೊತ್ತಿಲ್ಲ ಎಂದರು.
55 ವರ್ಷಗಳಿಂದ ನಾನು ರಾಜಕೀಯ ಮಾಡ್ತಿದ್ದೇನೆ. 11 ಚುನಾವಣೆ ಎದುರಿಸಿದ್ದೇನೆ. ಯಾರು ಬರುತ್ತಾರೆ ಯಾರು ಹೋಗುತ್ತಾರೆ ನನಗೆ ಗೊತ್ತಿರಲ್ಲ. ನನ್ನ ವಯಸ್ಸಿಗೆ ಬೆಲೆ ಕೊಡಬೇಕು. ಹೀಗೆಲ್ಲ ಮಾಡಿದ್ರೆ ಮಾನಸಿಕವಾಗಿ ನನಗೆ ನೋವಾಗುತ್ತೆ. ಯಾವುದೇ ವ್ಯವಹಾರ ನನಗೆ ವಿಲ್ಸನ್ ಗಾರ್ಡನ್ ನಾಗನ ಜೊತೆ ಇಲ್ಲ. ನಾನು ಅವರನ್ನು ನೋಡಿಯೂ ಇಲ್ಲ. ಮಾತು ಆಡಿಸಿಲ್ಲ. ವಿಲ್ಸನ್ ಗಾರ್ಡನ್ ನಾಗ ಯಾರು ಅಂತಾನೂ ನನಗೆ ಗೊತ್ತಿಲ್ಲ ಅಂತ ಸ್ಪಷ್ಟಪಡಿಸಿದರು.

Previous articleಚಿಲುಮೆ ಸಂಸ್ಥೆ ಮಾದರಿಯಲ್ಲಿ ಸರ್ವೇ ಆರೋಪ: ಮೂವರ ವಶ
Next articleಅಲ್ಪಸಂಖ್ಯಾತ ಮತದಾರರ ಡಿಲೀಟ್ ಎಂಬುದು ಸುಳ್ಳು: ಸಿಎಂ ಬೊಮ್ಮಾಯಿ