ಲಾಯರ್ ಜಗದೀಶ್, ಗನ್‌ಮ್ಯಾನ್ ಬಂಧನ

0
62

ಕೊಡಿಗೆಹಳ್ಳಿ ಗಲಾಟೆ ಪ್ರಕರಣ

ಬೆಂಗಳೂರು: ಕೊಡಿಗೆಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಯರ್ ಜಗದೀಶ್ ಹಾಗೂ ಗನ್ ಮ್ಯಾನ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ನಿನ್ನೆ ನಡೆದ ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರು ಗಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಲೈವ್‌ನಲ್ಲಿ ಮಾತನಾಡಿದ್ದರು. ನಡೆದ ಘಟನೆಯಲ್ಲಿ ಜಗದೀಶ್ ಗಾಯಗೊಂಡಿದ್ದಕ್ಕೆ ಪೊಲೀಸರೇ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಜಗದೀಶ್, ಅವರ ಮಗ ಆರ್ಯನ್ ಹಾಗೂ ಇಬ್ಬರು ಗನ್ ಮ್ಯಾನ್ ಗಳನ್ನು ಅರೆಸ್ಟ್ ಮಾಡಿದ್ದಾರೆ. ಇಂದು ಜಗದೀಶ್ ಅವರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ.

Previous articleಬಾಲಕಿಗೆ ಲೈಂಗಿಕ ಕಿರುಕುಳ: ತ್ವರಿತ ಕ್ರಮಕ್ಕೆ ಸಚಿವೆ ಹೆಬ್ಬಾಳಕರ್ ಸೂಚನೆ
Next articleಏಪ್ರಿಲ್ ಅಂತ್ಯಕ್ಕೆ 3 ಸಾವಿರ ಲೈನ್‌ಮೆನ್