ನಮ್ಮ ಮೆಟ್ರೋ ಸೇವೆ ಮುಂಜಾನೆ 05:00ಕ್ಕೆ ಬದಲಾಗಿ 04:15 ರಿಂದ ಪ್ರಾರಂಭ
ಬೆಂಗಳೂರು: ಪ್ರತಿ ಸೋಮವಾರದಂದು ನಮ್ಮ ಮೆಟ್ರೋ ಸೇವೆ ಮುಂಜಾನೆ 05:00ಕ್ಕೆ ಬದಲಾಗಿ 04:15 ರಿಂದ ಪ್ರಾರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಪ್ರತಿ ಸೋಮವಾರದಂದು ಮಾತ್ರ ಮೆಟ್ರೋ ಸೇವೆ ಮುಂಜಾನೆ 4.15 ಕ್ಕೆ ಆರಂಭವಾಗುತ್ತದೆ, ಇದರಿಂದ ನಗರಕ್ಕೆ ಹಿಂದಿರುಗುವ ಪಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸುವ ಸಲುವಾಗಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಮೆಟ್ರೋ ಸೇವೆಯನ್ನು ದಿನಾಂಕ 13ನೇ ಜನವರಿ 2025 ರಿಂದ ಜಾರಿಗೆ ಬರುವಂತೆ ಈಗಿರುವ ಮುಂಜಾನೆ 05:00ಕ್ಕೆ ಬದಲಾಗಿ 04:15 ರಿಂದ ಪ್ರಾರಂಭಿಸಲಿದೆ. ಮತ್ತೆಲ್ಲಾ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಸುಗಮ ಪಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೋರಿದೆ.