ಕೋರೇಗಾಂವ್ ಯುದ್ಧ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಬರೋಬ್ಬರಿ 30 ಸಾವಿರ ಸೈನಿಕರನ್ನು ಕೇವಲ 500 ಜನ ಮಹರ್ ಸೈನಿಕರು ಸೋಲಿಸಿದ ಕದನ.
ಬೆಂಗಳೂರು: ಬಾಬಾ ಸಾಹೇಬರು ಪ್ರತಿಬಾರಿ ಭೇಟಿ ನೀಡುತ್ತಿದ್ದ ಸ್ಥಳಗಳ ಪೈಕಿ ಕೋರೇಗಾವ್ಂ ಕೂಡಾ ಒಂದು ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ದಾಸ್ಯದ ವಿರುದ್ಧ ಹಾಗೂ ಮನುವಾದಿಗಳ ಅಮಾನವೀಯ ಶೋಷಣೆಯ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸ್ಪೋಟಗೊಂಡ ಈ ಹೋರಾಟವು ಭಾರತದ ಪಾಲಿಗೆ ಮೊದಲನೇ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಗಿದೆ.
ಕೋರೇಗಾಂವ್ ಯುದ್ಧ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಬರೋಬ್ಬರಿ 30 ಸಾವಿರ ಸೈನಿಕರನ್ನು ಕೇವಲ 500 ಜನ ಮಹರ್ ಸೈನಿಕರು ಸೋಲಿಸಿದ ಕದನ.
ಪೇಶ್ವೆಗಳ ಆಡಳಿತದಲ್ಲಿ ಕೆಟ್ಟದಾಗಿ ಇದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳಿಗಾಗಿ ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿ, ಹೋರಾಟ ನಡೆಸಿ ಪಡೆದ ಗೆಲುವು.
ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ.
ಇಂತಹ ಹೋರಾಟದ ಸ್ಪೂರ್ತಿಯ ದಿನದಂದು ಕೋರೇಗಾವ್ಂ ವೀರರನ್ನು ನೆನೆಯುತ್ತಾ ಎಲ್ಲರಿಗೂ ವಿಜಯ ದಿವಸದ ಶುಭಾಶಯಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.