ಸಿದ್ದು ಸರ್ಕಾರದಿಂದ ಸೇಡಿನ ರಾಜಕಾರಣ

0
29
ಜಗದೀಶ ಶೆಟ್ಟರ್‌

ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದಾಗಿ ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ತಾಂಡವಾಡುತ್ತಿರುವುದರಿಂದ ಜನರು ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಡಾ ಹಗರಣ, ವಾಲ್ಮೀಕಿ ಹಗರಣ ಹೊರ ಬರುತ್ತಿದ್ದಂತೆ ಬಿಜೆಪಿ ಮುಖಂಡರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ನೂರಾರು ಕೋಟಿ ಹಗರಣ ಹೊರ ಬರುತ್ತಿದ್ದಂತೆ ಬಿಜೆಪಿಯವರನ್ನು ಬಂಧಿಸಲಾಗುತ್ತಿದೆ. ನ್ಯಾಯಾಂಗ ತನಿಖೆಯ ಮಧ್ಯಂತರ ವರದಿ ತರಿಸುವುದು, ಕೇಸ್ ಹಾಕುವುದು, ಎಸ್‌ಐಟಿ ತನಿಖೆ ಮಾಡಿಸುವುದೇ ಸರ್ಕಾರದ ಸಾಧನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಪಿಎ ಕಿರುಕುಳದಿಂದ ಎಸ್‌ಡಿಎ ಆತ್ಮಹತ್ಯೆ ಮಾಡಿಕೊಂಡ. ಆದರು ಅವರ ಪಿಎ ಬಂಧನ ಆಗದೆ ಬೇಲ್ ಪಡೆದು ಆಚೆ ಓಡಾಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಪ್ರಿಯಾಂಕಾ ಖರ್ಗೆ ಪಿಎ ಒತ್ತಡದಿಂದ ಗುತ್ತೆದಾರ ಆತ್ಮಹತ್ಯೆ ಮಾಡಿಕೊಂಡ. ಪ್ರಿಯಾಂಕ್ ಖರ್ಗೆ ಪಿಎ ಅನೇಕ ಶಾಸಕರ ಒತ್ತಡವಿದೆ ಅಂತಹ ಡೆತ್‌ನೋಟ್ ಬರೆದಿಟ್ಟರು ಎಫ್‌ಐಆರ್ ದಾಖಲು ಮಾಡಿಲ್ಲ. ನಾವೆಲ್ಲ ಹೋರಾಟ ಮಾಡಿ, ಕೋರ್ಟ್‌ನಿಂದ ನಿರ್ದೇಶನ ಬಂದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಬಣ ರಾಜಕೀಯ ಶೀಘ್ರವೇ ಬಗೆಹರಿಯುತ್ತದೆ. ಈ ವಿಚಾರವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡು ಇತ್ಯರ್ಥ ಮಾಡುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Previous articleಅವಾಚ್ಯ ಪದ ಬಳಕೆ ಪ್ರಕರಣ: ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ
Next articleಪತಿ ಮನೆಯವರ ಕಿರುಕುಳ: ನೇಣು ಬಿಗಿದು ವಿವಾಹಿತೆ ಆತ್ಮಹತ್ಯೆ