ಮನೆ ಬಾಗಿಲು ಬೀಗ ಮುರಿದು ಚಿನ್ನಾಭರಣ ಕಳ್ಳತನ

0
132

ಮಳವಳ್ಳಿ: ದುಷ್ಕರ್ಮಿಗಳು ಮನೆ ಬಾಗಿಲು ಮುರಿದು ಬೀರುನಲ್ಲಿಟ್ಟಿದ್ದ 60 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ನಡೆದಿದೆ. ಎನ್‌ಇಎಸ್ ಬಡಾವಣೆಯ ಆದರ್ಶ ಕಾನ್ವೆಂಟ್ ಬಳಿ ಇರುವ ಚೈತ್ರ ಎಂಬುವರ ಮನೆಯಲ್ಲಿ ಕಳ್ಳತನ ವಾಗಿದ್ದು ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ದುಷ್ಕರ್ಮಿಗಳು ಮನೆ ಮುಂಭಾಗದ ಬಾಗಿಲು ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಬೀರುನಲ್ಲಿಟ್ಟದ್ದ 60 ಗ್ರಾಂ ಸೇರಿದಂತೆ ಸುಮಾರು 4.20 ಲಕ್ಷ ರೂ.ಗೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ ಕಳುವಾಗಿದ್ದು ಈ ಸಂಬಂಧ ಚೈತ್ರರವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಸ್ಥಳಕ್ಕೆ ಟೌನ್ ಇನ್ಸ್‌ಪೆಕ್ಟರ್ ರವಿಕುಮಾರ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಈ ಸಂಬಂಧ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Previous articleಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು
Next articleಕಾಡುಪ್ರಾಣಿ ಬೇಟೆಗೆ ಇರಿಸಿದ್ದ 32 ನಾಡಬಾಂಬ್ ಪತ್ತೆ