ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ AI ಬಳಸಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದೆ.
ಹು-ಧಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ವಾಹನ ಸವಾರರಿಗೆ ಜಾಗೃತಿ ಸಂದೇಶವನ್ನು ನೀಡಿದ್ದು, ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಭ್ ಪಂಥ್ ಸೀಟ್ ಬೆಲ್ಟ್ ಹಾಕದೆ ಕಾರನ್ನು ಚಲಾಯಿಸಿಕೊಂಡು ಬರುವಾಗ ಪೊಲೀಸ್ ಅಧಿಕಾರಿಯಾಗಿ ಮೊಹಮ್ಮದ್ ಸಿರಾಜ್ ಕಾರನ್ನು ತಡೆಯುತ್ತಾರೆ. ಆಗ ಸೀಟ್ ಬೆಲ್ಟ್ ಹಾಕಿ ಕಾರ್ ಓಡಿಸಪ್ಪಾ… ಎಂದು ದಂಡ ಹಾಕುತ್ತಾರೆ. ಆ ವಿಡಿಯೋವನ್ನು AI ಮೂಲಕ ಸೃಷ್ಟಿಸಲಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.