ವಿಶ್ವನಾಥನ್ ಆನಂದ್ ಬಳಿಕ ಅತ್ಯುಚ್ಚ ಸ್ಥಾನ ಅಲಂಕರಿಸಿದ ಶಿಷ್ಯ

0
16

ಸಿಂಗಾಪುರ: ಭಾರತದ ಯುವ ಗ್ರ‍್ಯಾಂಡ್ ಮಾಸ್ಟರ್ ಡಿ. ಗುಕೇಶ್, ವಿಶ್ವ ಚೆಸ್ ಚಾಂಪಿ ಯನ್ ಆಗಿ ಹೊರಹೊಮ್ಮಿದ್ದಾರೆ. ಅತ್ಯಂತ ಕಿರಿಯ ವಿಶ್ವ ಚೆಸ್ ಸಾಮ್ರಾಟ ಎಂಬ ಹೆಗ್ಗಳಿಕೆ ಪಾತ್ರರಾಗಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ತಮಿಳುನಾಡಿನ ೧೮ ವರ್ಷ ವಯಸ್ಸಿನ ದೊಮ್ಮರಾಜು ಗುಕೇಶ್, ಗುರುವಾರ ನಡೆದ ೧೪ನೇ ಹಾಗೂ ಅಂತಿಮ ಸುತ್ತಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಹಣಾಹಣಿಯಲ್ಲಿ ಎದುರಾಳಿ ಚೀನಾದ ಹಾಲಿ ಚಾಂಪಿಯನ್ ೩೨ ವರ್ಷ ವಯಸ್ಸಿನ ಡಿಂಗ್ ಲಿರೆನ್ ಅವ ರನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿ ಹಿರಿಮೆ ಮೆರೆದರು.
ಎರಡನೇ ಭಾರತೀಯ…: ವಿಶ್ವನಾಥನ್ ಆನಂದ್ ಅವರ ನಂತರ ಜಾಗತಿಕ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಎಂಬ ಅಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಬಾಚಿಕೊಂಡ ವಿಶ್ವನಾಥನ್ ಆನಂದ್, ಕೊನೆಯ ಬಾರಿಗೆ ೨೦೧೩ ರಲ್ಲಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.
೧೯೮೫ ರಲ್ಲಿ ರಷ್ಯಾದ ಖ್ಯಾತ ಚೆಸ್ ಪಟು ಗ್ಯಾರಿ ಕಾಸ್ಪ ರೋವ್, ಅನಾ ಟೊಲಿ ಕಾರ್ಪೋವ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿ ದ್ದರು. ಆಗ ಅವರಿಗೆ ೨೨ ವರ್ಷ ವಯಸ್ಸು. ಆ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಎನಿಸಿದ ಚೆಸ್ ಪಟು ಎಂಬ ಹೆಗ್ಗಳಿಕೆಗೆ ಅಂದು ಪಾತ್ರರಾಗಿದ್ದರು.
ಈಗ ಗುಕೇಶ್ ಹದಿನೆಂಟನೇ ವಯಸ್ಸಿನಲ್ಲೇ ಕಿರೀಟ ತೊಡುವ ಮೂಲಕ ಹೊಸ ಇತಿಹಾಸ ಬರೆದರು. ಈ ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ನಲ್ಲಿ ಜಯಗಳಿಸಿದ ನಂತರ, ತಮ್ಮ ಶ್ರೇಷ್ಠ ಆಟದ ಮೂಲಕ ಗಮನ ಸೆಳೆದಿದ್ದರು.

Previous articleಸಿಎಂ ಹುದ್ದೆಯನ್ನು ಡಿಕೆ ಒದ್ದು ಕಿತ್ಕೊಳ್ಳೋದು ಯಾವಾಗ ?
Next articleಮಸೀದಿಗಳ ಸರ್ವೇಗೆ ಸುಪ್ರೀಂಕೋರ್ಟ್‌ ಬ್ರೇಕ್!