ಚೆನ್ನೈ: ಪಾಠ ಕೇಳುತ್ತಿದ್ದ ವೇಳೆ ತರಗತಿಯಲ್ಲೇ ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ನಡೆದಿದೆ.
ರಾಣಿಪೇಟೆಯ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿರುವ ಖಾಸಗಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಅದ್ವಿತಾ(14) ಮೃತ ದುರ್ದೈವಿಯಾಗಿದ್ದಾಳೆ. ಬೆಳಿಗ್ಗೆ 11.30ರ ಸುಮಾರಿಗೆ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಕೊನೆಯ ಬೆಂಚ್‌ನಲ್ಲಿ ತನ್ನ ಸಹಪಾರಿಯ ಜೊತೆ ಕುಳಿತಿದ್ದ ವಿದ್ಯಾರ್ಥಿನಿ ಅದ್ವಿತಾ ಒಮ್ಮೆಲೇ ಕುಸಿದು ಸಹಪಾಠಿಯ ಮೇಲೆ ಬಿದ್ದಿದ್ದಾಳೆ. ಈ ವೇಳೆ ಗಾಬರಿಗೊಂಡ ಸಹಪಾಠಿ ಕಿರುಚಿದ್ದಾಳೆ ಕೂಡಲೇ ಶಿಕ್ಷಕಿ ಪ್ರಜ್ಞೆ ತಪ್ಪಿ ಅದ್ವಿತಾ ನೆರವಿಗೆ ಧಾವಿಸಿದ್ದಾರೆ. ಅಲ್ಲದೆ ಶಿಕ್ಷಕರು ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದರೆ, ಅಲ್ಲಿಂದ ವೈದ್ಯರು ಅದ್ವಿತಾ ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.