ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್: ಯುಪಿಗೆ ಚಿನ್ನ, ಕರ್ನಾಟಕಕ್ಕೆ ಬೆಳ್ಳಿ

0
28

ಬೆಂಗಳೂರು: ನಗರದ ಪವರ್ ಟ್ರ್ಯಾಕ್ ಸ್ಕೇಟಿಂಗ್ ರಿಂಗ್‌ನಲ್ಲಿ ನಡೆದ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶ ಚಿನ್ನದ ಪದಕ ಗೆದ್ದಿದ್ದು, ಅತಿಥೇಯ ಕರ್ನಾಟಕ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿಕೊಂಡಿದೆ. ತ್ರಿಶಾ ಮುಂದಾಳತ್ವದ ಕರ್ನಾಟಕ ತಂಡ ಕೊನೆವರೆಗೂ ಹೋರಾಡಿ, ೨ನೇ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇನ್ನು ಮಹಾರಾಷ್ಟ್ರ ತಂಡ ಮೂರನೇ ಸ್ಥಾನ ಪಡೆದು ಕಂಚನ್ನು ಪಡೆಯಿತು.
ಮೈಸೂರಿಗೆ ಕಾಲಿಟ್ಟ ಚಾಂಪಿಯನ್‌ಶಿಪ್
ಬೆಂಗಳೂರಿನಲ್ಲಿ ಮುಕ್ತಾಯಗೊಂಡ ೬೨ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮೈಸೂರಿನ ರಾವ್ಸ್ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ಆರಂಭಗೊಂಡಿದೆ. ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್(ಕೆಆರ್‌ಎಸ್‌ಎ) ವತಿಯಿಂದ ಇಂದೂಧರ್ ಸೀತಾರಾಮ್ ಅವರ ನೇತೃತ್ವದಲ್ಲಿ ಕ್ರಸಾ ಮತ್ತು ಶ್ರೀಕಂಠರಾವ್ ಸ್ಥಳದ ಆತಿಥೇಯರ ತಂಡವು ಆಯೋಜಿಸಿದ್ದು, ಈ ಕಾರ್ಯಕ್ರಮವು ೩೨ ರಾಜ್ಯಗಳಿಂದ ಸುಮಾರು ೨೦೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ.

Previous articleಅಶೋಕ್ ಹಾರನಹಳ್ಳಿ ಅವರಿಗೆ ಶಂಕರ ಅನುಗ್ರಹ ಪುರಸ್ಕಾರ
Next articleಆದಿತ್ಯ ಠಾಕ್ರೆ ಹೇಳಿಕೆ ಬಾಲಿಶ