ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಅರೆಸ್ಟ್‌

0
26

ಬೆಂಗಳೂರು: ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ ಶಿವು ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಗಿರಿನಗರದ ಬಳಿಯ ವೀರಭದ್ರನಗರ ಬಸ್‌ ನಿಲ್ದಾಣದ ಬಳಿ ಕಳೆದ ಶನಿವಾರ ರಾತ್ರಿ ಪುತ್ತಳಿಗೆ ಹಾನಿ ಮಾಡಿದ್ದ. 7 ವರ್ಷಗಳ ಹಿಂದೆ ರಾಜ್ ಶಿವು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಶನಿವಾರ ರಾತ್ರಿ ಸುತ್ತಿಗೆ ಸಮೇತ ಆರೋಪಿ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಎಸ್ಕೇಪ್ ಆಗಿದ್ದ. ಸದ್ಯ ಗಿರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Previous articleನಂದಿನಿ: ದೋಸೆ ಹಿಟ್ಟು ಉತ್ಪನ್ನವನ್ನು ಸರ್ಕಾರ‌‌ ನಿಲ್ಲಿಸಿದ್ದೇಕೆ
Next articleಪ್ರೀತಿಗೆ ವಿರೋಧ: ತಾಯಿ-ಮಗನ ಬರ್ಬರ ಹತ್ಯೆ