ಸರ್ಕಾರ ಕೆಡವಲು ಬಿಜೆಪಿಗೆ ಜೆಡಿಎಸ್ ಸಹಕಾರ

0
52

ರಾಮನಗರ: ಈ ಸರ್ಕಾರವನ್ನು ಕೆಡವಲು ನಾವು ಬಿಜೆಪಿಗೆ ಸಹಕಾರ ಕೊಡಬೇಕಾಗಿದೆ ಎಂದು ದಳಪತಿ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಬಿಡದಿ ಬಳಿಯ ಕೇತುಗನಹಳ್ಳಿ ಸಮೀಪದ ತಮ್ಮ ನಿವಾಸದಲ್ಲಿ ಅವರು ಭಾನುವಾರ ಜೆಡಿಎಸ್ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಮಾತನಾಡುತ್ತಾ ಈ ಸೂಚನೆ ನೀಡಿದರು. ಸ್ವತಃ ಅವರ ಪಕ್ಷದ (ಕಾಂಗ್ರೆಸ್) ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೊಂಡು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಸುಳಿವು ನೀಡಿದರು.
ಪಕ್ಷ ಬಲವರ್ಧನೆ ಮತ್ತು ಸಂಘಟನೆಯ ದೃಷ್ಟಿಯಿಂದ ರಾಜ್ಯಾದ್ಯಂತ ಮತ್ತೆ ಸದಸ್ಯತ್ವ ನೋಂದಣಿ ಪುನಾರಂಭವಾಗಬೇಕು ಎಂದು ತಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.

Previous articleವಿಜಯೇಂದ್ರ ಬಣಕ್ಕೆ ದಾವಣಗೆರೆಯಲ್ಲಿ ಉತ್ತರ
Next articleಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ: ಆತಂಕಗೊಂಡ ಜನ