ನಾಪತ್ತೆಯಾದ ಮೀನುಗಾರರ ಶೋಧ

0
33

ಪಣಜಿ: ಮೀನುಗಾರಿಕಾ ಬೋಟ್ ಮತ್ತು ಭಾರತೀಯ ನೌಕಾದಳದ ಹಡಗಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಬೋಟ್‌ನಲ್ಲಿದ್ದ ೧೩ ಮೀನುಗಾರರ ಪೈಕಿ ೧೧ ಮೀನುಗಾರರನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರಿಗಾಗಿ ನೌಕಾದಳ ಶೋಧ ಕಾರ್ಯ ಕೈಗೊಂಡಿದೆ.
ನವೆಂಬರ್ ೨೧ರಂದು ಸಂಜೆ ಗೋವಾದ ಉತ್ತರ-ಪಶ್ಚಿಮ ಸುಮಾರು ೭೦ ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಈ ಘಟನೆ ನಡೆದಿದೆ. ಮೀನುಗಾರಿಕಾ ಬೋಟ್‌ನಿಂದ ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಭಾರತೀಯ ನೌಕಾದಳದ ಹಡಗು ಮತ್ತು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಡಿಕ್ಕಿಗೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.

Previous articleವಕ್ಫ್ ಹೆಸರಲ್ಲಿ ಸಿದ್ಧರಾಮಯ್ಯ ಸರ್ಕಾರ ದ್ರೋಹ
Next articleರಾಜ್ಯದಲ್ಲಿ ಟಿಪ್ಪು, ಮೊಘಲ್ ಮಾದರಿಯ ದುರಾಡಳಿತ