ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ: ಓರ್ವ ಸಾವು

0
54

ಕುಳಗೇರಿ ಕ್ರಾಸ್(ಬಾಗಲಕೋಟೆ): ಗ್ರಾಮದಿಂದ ಬಾದಾಮಿಗೆ ತೆರಳುವ ರಾಜ್ಯ ಹೆದ್ದಾರಿಯ ಸೋಮನಕೊಪ್ಪ ಕ್ರಾಸ್ ಬಳಿ ಕಬ್ಬಿನ ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ರೋಣ ತಾಲೂಕ ಮೇಗುರು ಗ್ರಾಮದ ಕುಬೇರಪ್ಪ ಹುಚ್ಚಪ್ಪ ಅರಹುಸಿ (45) ಮೃತ ದುರ್ಧೈವಿ. ಬೈಕ್ ಹಿಂಬದಿ ಕುಳಿತಿದ್ದ ಕುಳಗೇರಿ ಕ್ರಾಸ್ ನಲ್ಲಿ ವಾಸವಾಗಿದ್ದ ಬಟ್ಟೆ ಅಂಗಡಿ ವ್ಯಾಪಾರಿ ಕೊಣ್ಣೂರ ಗ್ರಾಮದ ಕವಿತಾ ಈರಣ್ಣ ಬಾದಾಮಿ (ಉ.ಪಟ್ಟಣದ) ಗಂಭೀರವಾಗಿ ಗಾಯಗೊಂಡಿದ್ದು 108 ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾದಾಮಿಯಿಂದ ಕುಳಗೇರಿ ಕ್ರಾಸ್‌ಗೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಾದಾಮಿ ಪಿಎಸ್‌ಐ ವಿಠಲ್.ನಾಯಕ್ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Previous articleಸುನೀತಾ ವಿಲಿಯಮ್ಸ್‌ಗೆ ತಾಜಾ ಆಹಾರದ ಕೊರತೆ
Next articleಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ